ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯಿಂದ 200ನೇ ರಕ್ತದಾನ ಶಿಬಿರ


ಮಂಗಳೂರು: ಮರ್ಹೂಂ ನಿಝಾಮುದ್ದೀನ್ ಕೆಂಪಿ ಇವರ ಸ್ಮರಣಾರ್ಥವಾಗಿ ಬ್ಲಡ್ ಡೊನರ್ಸ್ ಮಂಗಳೂರು (ರಿ) ಇದರ ಯಶಸ್ವೀ 200 ನೇ ರಕ್ತದಾನ ಶಿಬಿರವು ಇದೇ ಬರುವ ಆಗಸ್ಟ್ 25 ನೇ ಆದಿತ್ಯವಾರದಂದು ಉಬಾರ್ ಡೋನರ್ಸ್ ಉಪ್ಪಿನಂಗಡಿ ಮಂಬಾಹು ರಹ್ಮ ಚಾರಿಟೇಬಲ್ ಟ್ರಸ್ಟ್ (ರಿ)ಐ ಎಂ ಡಬ್ಲ್ಯು ಎ ಪೆರಿಯಡ್ಕ (ರಿ) ಸಿಲ್ವರ್ ಸ್ಪೂನ್ ಕ್ಯಾಟರರ್ಸ್ ಎ ಜೆ ಆಸ್ಪತ್ರೆ ಮಂಗಳೂರು ಸಹಭಾಗಿತ್ವದೊಂದಿಗೆ ಉಪ್ಪಿನಂಗಡಿ ಪೃಥ್ವಿ ಶಾಪಿಂಗ್ ಮಹಲ್ ಎದುರುಗಡೆ ನಡೆಯಲಿದೆ.. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಲೀಕುದ್ದೀನಾರ್ ಜುಮಾ ಮಸೀದಿ ಉಪ್ಪಿನಂಗಡಿ ಇದರ ಅಧ್ಯಕ್ಷರಾದ ಅಲ್ಹಾಜ್ ಮುಸ್ತಫಾ ಕೆಂಪಿ ವಹಿಸಲಿಕ್ಕಿದ್ದಾರೆ... ರಕ್ತದಾನ ಶಿಬಿರದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷರಾದ ಶ್ರೀಯುತ ಮಿಥುನ್ ರೈ ಅವರು ಮಾಡಲಿದ್ದಾರೆ.. ಕಾರ್ಯಕ್ರಮದಲ್ಲಿ ದುವಾಶೀರ್ವಾದಕ್ಕೆ ಮಾಲೀಕುದ್ದೀನಾರ್ ಜುಮಾ ಮಸೀದಿ ಉಪ್ಪಿನಂಗಡಿ ಇದರ ಖತೀಬರಾದ ಬಹುಮಾನ್ಯರಾದ ನಝೀರ್ ಅಝ್ಹರಿ ಬೊಳ್ಮಿನಾರ್ ನೇತೃತ್ವ ನೀಡಲಿದ್ದಾರೆ .. ಕಾರ್ಯಕ್ರಮದ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ರೈ ಚಾರಿಟೇಬಲ್ ಟ್ರಸ್ಟ್(ರಿ) ಮುಖ್ಯಸ್ಥರಾದ ಅಶೋಕ್ ರೈ ಕೋಡಿಂಬಾಡಿ, ದೀನರ ಕನ್ಯಾ ಮಾತೆಯ ಧರ್ಮಗುರುಗಳಾದ ರೆವರೆಂಡ್ ಅಬೆಲ್ ಲೋಬೋ ,ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷರಾದ ಮಸ್ಊದ್ ಸಅದಿ ಹಾಗೂ ಇನ್ನಿತರ ಸಾಮಾಜಿಕ ,ಧಾರ್ಮಿಕ,ರಾಜಕೀಯ ಮುಖಂಡರುಗಳು ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿರುತ್ತಾರೆ..
Previous Post
Next Post

0 Post a Comment: