ಬೀದಿ ಬದಿಯ 76 ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಣೆ 

ಟೈಮ್ಸ್ ಆಫ್ ಕೂರ್ಗ್ 
ಮಡಿಕೇರಿ :ದೀನ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಬೀದಿ ಬದಿಯ 76 ಮಂದಿ ವ್ಯಾಪಾರಿಗಳಿಗೆ ಗುರುತಿನ ಚೀಟಿಯನ್ನು ನಗರಸಭೆ ವತಿಯಿಂದ ಇತ್ತೀಚೆಗೆ ವಿತರಿಸಲಾಯಿತು. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುತಿನ ಚೀಟಿ ವಿತರಿಸಿ ಮಾತನಾಡಿದ ಪೌರಾಯುಕ್ತರಾದ ಎಂ.ಎಲ್.ರಮೇಶ್ ಅವರು ಬೀದಿಬದಿ ವ್ಯಾಪಾರಿಗಳು ಜೀವನ ಉತ್ತಮ ಪಡಿಸಿಕೊಳ್ಳಲು ಶ್ರಮಿಸಬೇಕಿದೆ ಎಂದರು. ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ಸಹ ಪ್ರತಿಯೊಬ್ಬರೂ ಉತ್ತಮ ಬದುಕು ಕಟ್ಟಿಕೊಳ್ಳುವಂತಾಗಬೇಕು. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು. ಬೀದಿ ಬದಿಯ ವ್ಯಾಪಾರಿಗಳಿಗೆ ಸರ್ಕಾರ 50 ಸಾವಿರ ರೂ. ಸಹಾಯಧನ ಕಲ್ಪಿಸುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದು ಅವರು ಸಲಹೆ ಮಾಡಿದರು. ಅನುಪಯುಕ್ತ ವಸ್ತುಗಳನ್ನು ಶೇಖರಣೆ ಮಾಡಿ ಮತ್ತೆ ಉಪಯೋಗಿಸಬೇಕು. ಉಪಯೋಗಿಸದಿರುವ ವಸ್ತುಗಳನ್ನು ನಗರಸಭೆಯ ಸಂಚಾರಿ ವಾಹನಕ್ಕೆ ನೀಡಬೇಕು ಎಂದು ಪೌರಾಯುಕ್ತರು ಹೇಳಿದರು. ಸಮುದಾಯ ಸಂಘಟಕರಾದ ಜಯಲಕ್ಷ್ಮೀ, ಬಸೀರ್ ಇತರರು ಇದ್ದರು.

Previous Post
Next Post

0 Post a Comment: