ಅಮಾಯಕ ರವೂಫ್ ವಿರುದ್ಧ ಭಯೋತ್ಪಾದಕ ಎಂದು ಸುಳ್ಳು ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ಧ ಕ್ರಮಕೈಗೊಳ್ಳಲು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ SSF ಸೋಮವಾರಪೇಟೆ ಡಿವಿಷನ್


ವರದಿ : ಶಿಬಿಲಿ ಕಲ್ಕಂದೂರ್
ಸೋಮವಾರಪೇಟೆ : ಅಮಾಯಕ ಮದರಸ ಅಧ್ಯಾಪಕ ರವೂಫ್ ಬೆಳ್ತಂಗಡಿ ರವರ ಬಗ್ಗೆ ಭಯೋತ್ಪಾದಕ ಎಂದು ಸುಳ್ಳು ಪ್ರಸಾರ ಮಾಡಿದ ದೃಶ್ಯ ಮಾಧ್ಯಮಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ( SSF ) ಸೋಮವಾರಪೇಟೆ ಡಿವಿಷನ್ ತಾಲೂಕು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
  ಇತ್ತಿಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗೋವಿಂದೂರು ನಿವಾಸಿ ಅಮಾಯಕ ರವೂಫ್ ಎಂಬುವವರ ಬಗ್ಗೆ ರಾಜ್ಯ ಮಟ್ಟದ ದೃಶ್ಯಮಾಧ್ಯಮಗಳು, ಪತ್ರಿಕೆಗಳು ಭಯೋತ್ಪಾದಕ ಎಂಬ ಪಟ್ಟಕಟ್ಟಿ ದಿನಾಂಕ 19/08/2019 ಸೋಮವಾರದಂದು ವಾರ್ತೆಗಳನ್ನು ಬಿತ್ತರಿಸಿದ್ದು, ಈ ಮೂಲಕ ರವೂಫ್ ಎಂಬ ಅಮಾಯಕ ವ್ಯಕ್ತಿಯನ್ನು ಜನಸಾಮಾನ್ಯರು ಅನುಮಾನದಿಂದ ನೋಡುವಂತೆ ಮಾಡಿದೆ. ಇಂತಹ ಮಾಧ್ಯಮಗಳ ಭಯೋತ್ಪಾದನೆಯನ್ನು ನಿಲ್ಲಿಸಲು ಕಠಿಣ ಕ್ರಮಕೈಗೊಳ್ಳಬೇಕೆಂದು SSF ಸೋಮವಾರಪೇಟೆ ಡಿವಿಷನ್ ಸಮಿತಿ ಮನವಿ ಸಲ್ಲಿಸಿದೆ.
ಡಿವಿಶನ್ ಅಧ್ಯಕ್ಷರಾದ ಶಾಫಿ ಸ‌ಅದಿ,ಕಾರ್ಯದರ್ಶಿ ಉನೈಸ್,ಹಸೈನಾರ್ ಮುಸ್ಲಿಯಾರ್, ಅಬ್ದುಲ್ ರಹೀಂ,ಶಿಹಾಬ್ ತಂಙ್ಞಳ್,ಬಶೀರ್,ಶಿಬ್‌ಲೀ ಕಲ್ಕಂದೂರ್ ,ಸ್ವಾಲಿಹ್ ರಹ್ಮಾನಿ ಮುಂತಾದವರು ಉಪಸ್ತಿತರಿದ್ದರು.
Previous Post
Next Post

0 Post a Comment: