ಟೈಮ್ಸ್ ಆಫ್ ಕೂರ್ಗ್/ ದಕ್ಷಿಣ ಕನ್ನಡ
ಪುತ್ತೂರು : ಪುತ್ತೂರುವಿನ ಕೋರ್ಟ್ ರಸ್ತೆಯ ಫಾರ್ಚೂನ್ ಮಾಲ್ ನಲ್ಲಿ ಕಾರ್ಯಚರಿಸುತ್ತಿರುವ ಟೋಪ್ಕೊ ಝಮ್ ಝಮ್ ಜುವೆಲ್ಲರಿಯ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಪುತ್ತೂರು ಶಾಖೆಯಲ್ಲಿ ' ಟೋಪ್ಕೋ ಸಂಭ್ರಮ' ಕಾರ್ಯಕ್ರಮಕ್ಕೆ ನೆನ್ನೆ ( 20 ಆಗಸ್ಟ್) ರಂದು ಚಾಲನೆ ನೀಡಲಾಯಿತು. ಅನ್ಸಾರುದ್ದೀನ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾದ ಎಲ್.ಟಿ ಅಬ್ದುಲ್ ರಝಾಕ್, ವಕೀಲರಾದ ಸಾಯಿರ, ಬಪ್ಪಳಿಗೆ ಮಸೀದಿ ಅಧ್ಯಕ್ಷರಾದ ದಾವೂದ್, ಸುಬ್ರಹ್ಮಣ್ಯಂ ಬಡಗನ್ನೂರು, ಇಬ್ರಾಹಿಮ್ ಕುಂಬ್ರ, ಮೊದಲಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ಸಂಸ್ಥೆಯ ಮಾಲೀಕರಾದ ಮುಹಮ್ಮದ್ ಟಿ.ಕೆ , ಸಂಸ್ಥೆಯ ಸಿಬ್ಬಂದಿಗಳಾದ ಆಲ್ ಸಬರ್, ಅಜೀಜ್ , ಗೋಪಾಲ್, ರಮೇಶ್, ಶಾಫಿ ಅತಿಥಿಗಳಿಗೆ ಹೂಗುಚ್ಛ ನೀಡಿ ಗೌರವಿಸಿದರು. ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.








0 Post a Comment: