ಪುತ್ತೂರು: ಬೆಳ್ತಂಗಡಿಯ ಅಮಾಯಕ ಮೌಲವಿ ರವೂಫ್ ಎಂಬವರನ್ನು ಭಯೋತ್ಪಾದಕ ಎನ್ನುವಂತೆ ಬಿಂಬಿಸಿ ಇಲ್ಲಿನ ಕೆಲವು ಮಾಧ್ಯಮಗಳು ವರದಿ ಬಿತ್ತರಿಸಿದ್ದು ಅತ್ಯಂತ ಖಂಡನೀಯವಾಗಿದ್ದು, ಎಸ್ಸೆಸ್ಸಫ್ ಇಂತಹ ಮಾಧ್ಯಮ ಭಯೋತ್ಪಾದನೆಯ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲು ಚಿಂತನೆ ನಡೆಸುತ್ತಿದೆ. ಇದಕ್ಕೂ ಮೊದಲು ಅವಿಭಜಿತ ಜಿಲ್ಲೆಯಲ್ಲಿ ಕೆಲವರನ್ನು ಇದೇ ರೀತಿಯ ಕಪೋಲಕಲ್ಪಿತ ವರದಿಗಳ ಮೂಲಕ ಭಯೋತ್ಪಾದಕರನ್ನಾಗಿ ಬಿಂಬಿಸಲು ಪ್ರಯತ್ನ ಪಟ್ಟಿದ್ದ ಮಾಧ್ಯಮಗಳು ಒಂದು ಸಮುದಾಯದ ವಿರುದ್ಧ ನಡೆಸುವ ಷಡ್ಯಂತ್ರಗಳ ಭಾಗವಾಗಿದೆ ಇಂತಹ ಘಟನೆಗಳು ಮರುಕಳಿಸಲು ಕಾರಣ. ನಿರಪರಾಧಿಗಳನ್ನು ಭಯೋತ್ಪಾದಕರನ್ನಾಗಿಸುವ ಮಾಧ್ಯಮಗಳ ವಿರುದ್ಧ ಕಾನೂನು ಪಾಲಕರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಎಸ್ ಎಸ್ ಎಫ್ ದ.ಕ ಜಿಲ್ಲಾ ಈಸ್ಟ್ ಸಮಿತಿ ಆಗ್ರಹಿಸಿದೆ
ಅಮಾಯಕರಿಗೆ ಉಗ್ರ ಪಟ್ಟ: ಎಸ್ಸೆಸ್ಸಫ್ ಖಂಡನೆ
Categories:
ಕೊಡಗು
ದಕ್ಷಿಣ ಕನ್ನಡ
ರಾಜ್ಯ ಸುದ್ದಿ
Publish Date:
أغسطس 20, 2019

0 Post a Comment: