ತೋರ ಗುಡ್ಡಕುಸಿತ: ಲೀಲಾ ಎಂಬುವವರ ಮೃತದೇಹ ಪತ್ತೆ.. 


ವಿರಾಜಪೇಟೆ: ಆಗಸ್ಟ್ 9ರ ಮುಂಜಾನೆ ವಿರಾಜಪೇಟೆಯ ತೋರಗ್ರಾಮದಲ್ಲಿ ಉಂಟಾದ ಭೀಕರ ಜಲಸ್ಫೋಟ ಹಾಗೂ ಗುಡ್ಡಕುಸಿತದಿ ಮಣ್ಣಿನಡಿ ಸಿಲುಕಿ ಕಾಣೆಯಾಗಿದ್ದ 10 ಜನರ ಪೈಕಿ 5 ಮೃತದೇಹಗಳು ಈ ಹಿಂದೆ ಸಿಕ್ಕಿದ್ದು. ಇದೀಗ ಬರೋಬ್ಬರಿ 13ದಿನಗಳ ತೀವ್ರ ಕಾರ್ಯಚರಣೆಯಿಂದಾಗಿ 6ನೇ ಮೃತದೇಹ ಪತ್ತೆಯಾಗಿದೆ. ಪತ್ತೆಯಾಗಿರುವ ಮೃತದೇಹ #ಲೀಲಾ(55)ಅವರದ್ದು ಎಂದು ಗುರುತಿಸಲಾಗಿದ್ದು ಮೃತ ದುರ್ದೈವಿ #ಅಪ್ಪುರವರ ಪತ್ನಿಯಾಗಿದ್ದು. ಜಲಸ್ಫೋಟದಲ್ಲಿ ಅಪ್ಪುರವರು ಮರಣಹೊಂದಿದ್ದು ಅವರ ಮೃತದೇಹ ಈಗಾಗಲೇ ಪತ್ತೆಯಾಗಿರುತ್ತದೆ. ಕಾಣೆಯಾಗಿರುವ ನಾಲ್ಕು ಮಂದಿಗಾಗಿ ಶೋದಕಾರ್ಯ ಮುಂದುವರೆದಿದೆ.

Previous Post
Next Post

0 Post a Comment: