ಟೈಮ್ಸ್ ಆಫ್ ಕೂರ್ಗ್ ( ದಕ್ಷಿಣ ಕನ್ನಡ )
ವರದಿ: ಮುಫಿದಾ ಎಂ.ಎಂ ದೇರಳಕಟ್ಟೆ
ಮಂಗಳೂರು: 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇರಳಕಟ್ಟೆ ಜಲಾಲ್ ಬಾಗ್ ನಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ಲಾ ದೇರಳಕಟ್ಟೆ ವಹಿಸಿದರು. ಮುಖ್ಯ ಅತಿಥಿಯಾಗಿ ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯರಾದ ಪುಷ್ಟೀ ಮಹಮ್ಮದ್ ಧ್ವಜಾರೋಹಣವನ್ನು ಮಾಡಿದರು. ಈ ಸಂದರ್ಭದಲ್ಲಿ ಹಸನ್ ಸಾಹೇಬ್, ಎಂ. ಎನ್. ನಿಯಾಝ್ ಹಾಗೂ ಸ್ಥಳೀಯ ನಾಗರಿಕ ಬಂಧುಗಳು ಉಪಸ್ಥಿತರಿದ್ದರು.

0 Post a Comment: