ಸಂತ್ರಸ್ತರಿಗೆ ಸಾಂತ್ವನ ನೀಡಿದ SYS SSF ಇಸಾಬ ಸುಳ್ಯ ಪುತ್ತೂರು ಕೊಡಗು ಜಿಲ್ಲೆಯ ಕಾರ್ಯಕರ್ತರ ಕಾರ್ಯಚರಣೆ


ವರದಿ : ಶಿಬಿಲಿ ಕಲ್ಕಂದೂರು 
ಮಡಿಕೇರಿ : ಪ್ರವಾಹ ಪೀಡಿತ ಕೊಡಗಿನ ಕೊಂಡಂಗೇರಿ ನೆಲ್ಯಹುದಿಕೇರಿ ಬೇತ್ರಿ ಇತರೆ ಪ್ರದೇಶಗಳಲ್ಲಿ 200ಕ್ಕೂ ಹೆಚ್ಚು ಬರುವ SYS SSF ಇಸಾಬ ಕಾರ್ಯಕರ್ತರು ಶುಚೀಕರಣ ಕಾರ್ಯಾಚರಣೆ ನಡೆಸಿದರು. ಚೆರಿಯಪರಂಬು ಗ್ರಾಮಕ್ಕೆ ತೆರಳಿದ SSF ಕೊಡಗು ಜಿಲ್ಲಾ ಉಪಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆಯವರ ತಂಡ ಇಡೀ ಮನೆಯೇ ಬಿದ್ದು ಹೋಗುತ್ತದೆ ಎಂದು ಭಯಭೀತರಾಗಿದ್ದ ಮನೆಯವರ ಒಳಗಿದ್ದ ವಸ್ತುಗಳನ್ನು ಹೊರಗೆ ತರುವಲ್ಲಿ ಯಶಸ್ವಿಯಾದರು.

 ನಂತರ ಹಲವು ಮನೆಗಳಿಗೆ ಭೇಟಿ ಸಾಂತ್ವನ ಹೇಳಿದರು.
ಇತ್ತ ಕೊಂಡಂಗೇರಿಯಲ್ಲಿ ಎಲ್ಲಿ ನೋಡಿದರೂ ಹಳದಿ ಕೋಟು ಧರಿಸಿದ SYS SSF ಇಸಾಬ ಕಾರ್ಯಕರ್ತರು ತಮ್ಮ ಮನೆಗಳಂತೆ ಸ್ವಚ್ಛಗೊಳಿಸುವುದು ಕಂಡುಬಂತು. ರಾಜ್ಯ ನಾಯಕರಾದ ಅಡ್ವಕೇಟ್ ಶಾಕಿರ್ ,SYS ಇಸಾಬ ನಾಯಕರಾದ ಉಮರ್ ಸಖಾಫಿ ನಿರ್ದೇಶನಗಳನ್ನು ನೀಡುತ್ತಿದ್ದರು. ನಾಯಕರ ಮಾರ್ಗದರ್ಶನವನ್ನು ಚಾಚು ತಪ್ಪದೇ ನಿರ್ವಹಿಸುತ್ತಿದ್ದದ್ದು ಕಂಡುಬಂತು. ಇತ್ತ ಬೇತ್ರಿಯಲ್ಲಿಯೂ ಮಸೀದಿ ಶುಚೀಕರಣ, ಮನೆಗಳ ಶುಚೀರಣ ಕಾರ್ಯಚರಣೆ ನಡೆಸಿದರು. 
SSF ಕೊಡ್ಲಿಪೇಟೆ ಶಾಖೆಯ ಕಾರ್ಯಕರ್ತರಿಂದ ಕುಶಾಲನಗರ ನೂರೇ ಮದೀನ ಸಮೀಪ ಮನೆಗಳ ಶುಚೀರಣ ನಡೆಯಿತು.
ನೆಲ್ಯಹುದಿಕೇರಿ,ಕೊಟ್ಟಮುಡಿ, ಚೆರಿಯಪರಂಬು ಮುಂತಾದ ಪ್ರದೇಶಗಳಲ್ಲಿ SYS SSF ಕಾರ್ಯಕರ್ತರು ಸಕ್ರೀಯರಾಗಿದ್ದರು.


Previous Post
Next Post

0 Post a Comment: