ದಸರಾ ಗಜಪಯಣಕ್ಕೆ ವಿದ್ಯುಕ್ತ ಚಾಲನೆ


ಮೈಸೂರು, ಆ.22-ಈ ಬಾರಿಯ ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮ ಇಂದು ಪ್ರಾರಂಭವಾಗಿದ್ದು ಜಂಬುಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿರುವ ಮೊದಲ ಹಂತದ ಆನೆಗಳನ್ನು ಮೈಸೂರಿಗೆ ಕರೆತರುವ ಗಜಪಯಣ ಕಾರ್ಯಕ್ರಮಕ್ಕೆ ಇಂದು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಾಗರಹೊಳೆ ಅರಣ್ಯ ಪ್ರದೇಶದಲ್ಲಿರುವ ವೀರನ ಹೊಸಹಳ್ಳಿ ಗ್ರಾಮದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.    ದಸರಾ ಮೆರವಣಿಗೆಯಲ್ಲಿ ಭಾಗವಹಿಸಲಿರುವ ಮೊದಲ ಹಂತದ ಭಾವನೆಗಳಿಗೆ ಪೂರ್ಣಕುಂಭ, ಮಂಗಳವಾದ್ಯ, ದೊಳು ವಾದ್ಯ, ಕಂಸಾಳೆ ನೃತ್ಯ ಮುಂತಾದ ಕಲಾತಂಡಗಳ ಕಾರ್ಯಕ್ರಮಗಳನ್ನು ವೀರನಹೊಸಳ್ಳಿ ಗ್ರಾಮದಿಂದ ಮೈಸೂರಿನತ್ತ ಪ್ರಯಾಣ ಬೆಳೆಸಲು ಬೀಳ್ಕೊಡಲಾಯಿತು.     ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಶಾಸಕ ರಾಮದಾಸ್,  ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಪುಷ್ಪಲತಾ ಜಗನ್ನಾಥ್, ವಲಯ ಅರಣ್ಯಾಧಿಕಾರಿ ಅಲೆಕ್ಸಾಂಡರ್, ಜಿಲ್ಲಾ ಎಸ್.ಪಿ., ಸೇರಿದಂತೆ ಹಲವಾರು ಅಧಿಕಾರಿಗಳು ಅರಣ್ಯ ಇಲಾಖೆ ಸಿಬ್ಬಂದಿಗಳು,  ಪೊಲೀಸ್ ಸಿಬ್ಬಂದಿಗಳು ಸಾರ್ವಜನಿಕರು ಭಾಗವಹಿಸಿದ್ದು, ಮೊದಲನೇ ಹಂತದ ಗಜಪಡೆಗೆ  ಪುಷ್ಪಾರ್ಚನೆ  ಮಾಡುವ ಮೂಲಕ  ಗಜಪಯಣಕ್ಕೆ ಚಾಲನೆ ನೀಡಿದರು.     ಮೊದಲನೇ ಹಂತದ ಪಡೆಗೆ ಸಾಂಪ್ರದಾಯಿಕವಾಗಿ ಪೂಜೆಗಳನ್ನು ಸಲ್ಲಿಸಿ, ಆನೆಗಳಿಗೆ  ಕಬ್ಬು ,ಬೆಲ್ಲ, ಬಾಳೆಹಣ್ಣು, ಕೊಬ್ಬರಿ, ಇತ್ಯಾದಿ ಪದಾರ್ಥಗಳನ್ನು ತಿನ್ನಲು ನೀಡಲಾಯಿತು.     ಮೊದಲನೇ ಹಂತದ ಪಡೆಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರುವ ಅರ್ಜುನ 59, ವಿಜಯ 62, ಅಭಿಮನ್ಯು ವರಲಕ್ಷ್ಮಿ 63, ಧನಂಜಯ 36, ಈಶ್ವರ 49, ಎಂಬ ಆನೆಗಳು ಇಂದಿನ ಗಜ ಪಯಣದಲ್ಲಿ ಪಾಲ್ಗೊಂಡಿದ್ದವು.    ಗಜಪಯಣ ಚಾಲನೆ ಸಿಕ್ಕಿದ ನಂತರ ಆರು ಆನೆಗಳನ್ನು ಸುಮಾರು ದೂರದವರೆಗೆ ನಡೆಸಿಕೊಂಡು ಬಂದ ನಂತರ ಲಾರಿಗಳಲ್ಲಿ ಹತ್ತಿಸಿ ಮೈಸೂರಿಗೆ ಕಳುಹಿಸಿಕೊಡಲಾಯಿತು.    ಗಜಪಯಣದ ವೇಳೆ ಮಂಗಳವಾದ್ಯ ಮೊಳಗಿದವು, ಇವರೊಂದಿಗೆ ಡೊಳ್ಳು ಕುಣಿತ, ಕಂಸಾಳೆ ಕುಣಿತ, ವೀರಗಾಸೆ ಮುಂತಾದ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.      
Previous Post
Next Post

0 Post a Comment: