ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಶ್ಲೇಷ ಮಳೆಯ ಅಬ್ಬರ ಮುಂದುವರೆದಿದೆ. ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಕಾರ್ಗತಲ್ಲೆಯಲ್ಲಿ ದಿನದೂಡವಂತಾಗಿದೆ. ಈಗಾಗಲೇ ನದಿದಡದ ನಿವಾಸಿಗಳು ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಸೂಚನೆ ನೀಡಿದ್ದು, ಅಲ್ಲದೇ ನದಿ ಪಾತ್ರದ ನಿವಾಸಿಗಳು ಪರಿಹಾರ ಕೇಂದ್ರದ ಮೊರೆ ಹೋಗಿದ್ದಾರೆ.
ದಕ್ಷಿಣ ಕೊಡಗಿನಲ್ಲಿ ಮಳೆಯ ರುದ್ರನರ್ತನ: : ಗದ್ದೆಗಳು ಜಲಾವೃತ್ತ: ಸಂಚಾರ ಅಸ್ತವ್ಯಸ್ತ
ದಕ್ಷಿಣ ಕೊಡಗಿನಲ್ಲಿ ಮಳೆಯ ಬೀಕರತೆಯಿಂದಾಗಿ ಸಂಚಾರ ತೋಡಕಾಗಿದೆ ಅಲ್ಲಲ್ಲಿ ರಸ್ತೆಗೆ ಜಾರುತ್ತಿರುವ ಮರಗಳು,ನದಿ ತೊರೆಗಳು ತುಂಬಿಹರಿಯುತಿದೆ ಕೆಲವುಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ವಿರಾಜಪೇಟೆ ನಗರ ಮತ್ತು ಸುತ್ತಮುತ್ತಲ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ನೆಹರುನಗರದ ನಿವಾಸಿ ಕೆ.ಅರ್. ವಿಶ್ವನಾಥ್ ಅವರ ವಾಸದ ಮನೆಯ ಮೇಲೆ ತಡೆಗೋಡೆ ಕುಸಿದು ಮನೆಯು ಜಖ:ಗೊಂಡಿದೆ. ಅಲ್ಲದೇ ಕೆ.ಅರ್ ನಾರಾಯಣ್ ಅವರ ಮನೆಯ ಮೇಲೆ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗಿದೆ. ನಗರದಿಂದ ಮಲೆತಿರಿಕೆ ಬೆಟ್ಟಕ್ಕೆ ತೆರಳುವ ರಸ್ತೆಗೆ ಕೊಡಗು ದಂತ ಮಾಹಾವಿಧ್ಯಾಲಯದ ತಡೆಗೊಡೆಯು ಕುಸಿದುಬಿದ್ದಿದೆ. ಮಲೆತಿರಿಕೆ ಬೆಟ್ಟದಲ್ಲಿ ವಾಸ ಮಾಡುವ ನಿವಾಸಿಗಳಿಗೆ ಇದೇ ಮಾರ್ಗವು ಬಳಕೆಯಾಗುತ್ತಿದ್ದು ದಿನ ನಿತ್ಯ ನೂರಾರು ಸಂಖ್ಯೆಯಲ್ಲಿ ವಾಹನಗಳು ತೆರಳುತ್ತಿರುವುದರಿಂದ ವಾಹನ ಸಂಚಾರ ಮತ್ತು ಬೆಟ್ಟ ವಾಸಿಗಳು ತೆರಳಲು ಕಷ್ಟ ಸಾದ್ಯವಾಗಿದೆ. ಮಾಹಾಮಳೆಗೆ ಬೆಟ್ಟದಲ್ಲಿ ವಾಸಮಾಡುವ ನಿವಾಸಿಗಳಾದ ಮಂಜು, ರುಕ್ಕು,ಶ್ರೀನಿವಾಸ ಶರವಣ, ರೂಪೇಶ್ ಎ.ಕೆ ಎಂಬುವವರ ಮನೆಗಳಿಗೆ ತೀವ್ರ ರೀತಿಯಲ್ಲಿ ಹಾನಿಯಾಗಿರುತ್ತದೆ. ಪಟ್ಠಣ ಪಂಚಾಯಿತಿ ಸಿಬ್ಬಂದಿಗಳು ಹಾಗು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಅಗಮಿಸಿ ಕುಸಿದ ಮಣ್ಣು ತೆರವುಗೊಳಿಸುವ ಕಾರ್ಯವನ್ನು ಮುಂದುವರಿಸಿದ್ದಾರೆ. ನಗರದ ಮಾಂಸ ಮಾರುಕಟ್ಟೆಯ ಬಳಿಯಲ್ಲಿರುವ ರಾಜ ಕಾಲೂವೆಯ ತುಂಬಿ ಹರಿಯುತ್ತಿದ್ದು ವಿರಾಜಪೇಟೆ ಗೊಣಿಕೊಪ್ಪ ರಸ್ತೆಯ ಮೇಲೆ ಎರಡು ಅಡಿ ಎತ್ತರದಲ್ಲಿ ನೀರು ಸಂಗ್ರಹಗೊಂಡಿದೆ. ರಸ್ತೆಯು ಸಂಪೂರ್ಣ ಜಲಾವೃತ್ತಗೊಂಡು ಸಂಚಾರವು ಕಷ್ಟಸಾದ್ಯವಾಗಿದೆ. ರಸ್ತೆಯಲ್ಲಿ ಭಾರಿ ವಾಹನಗಳು ಮಾತ್ರ
ಸಂಚಾರ ಮಾಡುತ್ತಿದ್ದು ಲಘು ವಾಹನಗಳು ಸಂಚರಿಸಲು ಪರಿದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿರಾಜಪೇಟೆ ನಗರದ ಗ್ರಾಮಂತರ ಪ್ರದೇಶವಾದ ಕೆ.ಬೊಯಿಕೇರಿ- ಕೊಟ್ಟೊಳ್ಳಿ ರಸ್ತೆಯ ಕೀರು ಹೊಳೆಯು ತುಂಬಿ ಹರಿಯುತ್ತಿದ್ದು ಸೇತುವೆಯ ಮೇಲ್ಬಾಗದಲ್ಲಿ ನೀರು ಹರಿಯುತಿರುವುದರಿಂದ ಸಂಚಾರವು ಸ್ಥಗಿತಗೊಂಡಿದೆ ಅಲ್ಲದೆ ನೀರಿನ ಮಟ್ಟವು ಗರಿಷ್ಟ ಪ್ರಮಾಣದಲ್ಲಿ ಹರಿಯುತಿದ್ದು ಸುತ್ತಮುತ್ತಲಿನ ಪ್ರದೇಶವು ಜಲಾವೃತ್ತಗೊಂಡಿದೆ ಕೀರು ಹೊಳೆಯ ಸಮೀಪವಿರುವ ಕಾರ್ಮಿಕರ ನಿವಾಸವು ಅಪಾಯದ ಅಂಚಿನಲ್ಲಿದ್ದು ಕಾರ್ಮಿಕರನ್ನು ರಕ್ಷಣೆ ಮಾಡಲು ರಾಷ್ಟ್ರೀಯ ವಿಪ್ಪತ್ತು ನೀರ್ವಾಹಣ ದಳವು ಸ್ಥಳ ಅಗಮಿಸಿ ಕಾರ್ಮಿಕರನ್ನು ರಕ್ಷಣೆ ಮಾಡಿರುತ್ತಾರೆ. ಕೆದಮಳ್ಳೂರು ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಸಹಕಾರ ನೀಡಿರುತ್ತಾರೆ. ಇಂದು ಬೇಳಿಗ್ಗೆ ನಗರದ ಮೂರ್ನಾಡು ರಸ್ತೆಯ ಹಂದಿ ಮಾಂಸ ಮಾರುಕಟ್ಟೆಯ ಬಳಿ ಬ್ರಹತ್ ಮರವು ಧಾರೆಗೆಉರುಳಿದ ಪರಿಣಾಮ ಕೆಲವು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿದ್ದು ನಂತರದಲ್ಲಿ ಅರಣ್ಯ ಇಲಾಖೆ ಹಾಗು ಪಟ್ಟಣ ಪಂಚಾಯಿತಿಯ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿ ಸಂಚಾರ ಮುಕ್ತಮಾಡಿದರು. ವಿರಾಜಪೇಟೆ ಮಡಿಕೇರಿ ರಸ್ತೆ ಬೇತ್ರಿಯಲ್ಲಿ ಕಾವೇರಿ ನದಿ ಮೈದುಂಬಿ ಹಾರಿಯುತ್ತಿರುವುದರಿಂದ ನೀರು ರಸ್ತೆಯ ಮೇಲೆ ಹರಿಯುತಿರುವುದರಿಂದ ಪ್ರವಾಹದ ಭೀತಿ ಎದುರಾಗಿದೆ. ನಗರದಿಂದ ಅರ್ಜಿ ಗ್ರಾಮಕ್ಕೆ ತೆರಳುವ ಮಲಬಾರ್ ರಸ್ತೆಯಲ್ಲಿ ರಾಜ ಕಾಲೂವೆಯಿಂದ ಹರಿಯುವ ನೀರು ರಸ್ತೆಯ ಮೇಲ್ಬಾಗದಲ್ಲಿ ಹರಿಯುತ್ತಿದೆ ಹೊಸದಾಗಿ ನಿರ್ಮಾಣಗೊಂಡ ಸೇತುವೆಯ ಸಮೀಪವಿರುವ ಗದ್ದೆಗಳು ಜಲಾವೃತ್ತಗೊಂಡಿದೆ ಪೇರುಂಬಾಡಿ, ಅರ್ಜಿ ಮತ್ತು ಬೇಟೊಳಿ ಇತರಡೆಗಳಿಗೆ ತೆರಳುವ ಸಾರ್ವಜನಿಕರು ಸಂಕಷ್ಟಕ್ಕಿಡಾಗಿದ್ದಾರೆ. ಲಘು ವಾಹನದ ಚಾಲಕರು ಹಾರಿಯುವ ನೀರಿನಲ್ಲಿ
ವಾಹನವನ್ನು ಚಲಾಯಿಸಿಕೊಂಡು ಸಾಗುತ್ತಿದ್ದಾರೆ. ಮಳೆಯ ಬೀಕರತೆಗೆ ನಾಗರಿಕರು ಬೆಚ್ಚಿಬಿದ್ದಿದ್ದಾರೆ.ಇಲಾಖೆಗಳು ಮತ್ತು ತಾಲ್ಲೂಕು ಅಡಳಿತ ಹಾಗು ರಾಷ್ಟ್ರೀಯ ವಿಪ್ಪತ್ತು ನೀರ್ವಾಹಣ ದಳವು ಮಳೆಯಂದಾಗುವ ಅನಾಹುತಗಳನ್ನು ತಡೆಗಟ್ಟಲು ಶ್ರಮಿಸುತ್ತಿದ್ದಾರೆ. ಮಹಾ ಮಳೆಗೆ ಕುಶಾಲನಗರದ ೧೫ ಮನೆಗಳಿಗೆ ನೀರು ಪ್ರವೇಶ: ಕೊಡಗಿನಲ್ಲಿ ಹೆಚ್ಚುತ್ತಿರಿವ ಮಹಾಮಳೆಗೆ ಕುಶಾಲನಗರದ ಕೆಲವು ಬಡಾವಣೆಗಳಿಗೆ ನೀರು ಪ್ರವೇಶಸಿದ್ದು, ಸಾರ್ವಜನಿಕರಲ್ಲಿ ಮತ್ತೇ ಪ್ರವಾಹದ ಆತಂಕ ಸೃಷ್ಟಿಯಾಗಿದೆ. ಕುಶಾಲನಗರದ ಸಾಯಿ ಬಡಾವಣೆ, ಕುವೆಂಪು ಬಡಾವಣೆ, ಇಂದಿರಾ ಬಡಾವಣೆ, ನಿಜಾಮುದ್ದೀನ್ ಬಡಾವಣೆಯ ಹದಿನೈದಕ್ಕೂ ಹೆಚ್ಚು ಮನೆಗಳಿಗೆ ನೀರು ಪ್ರವೇಶಿಸಿದೆ. ಬೆಳಿಗ್ಗೆಯಿಂದ ನಿಧಾನಗತಿಯಲ್ಲಿ ಏರಿಕೆಯಾದ ನೀರು, ತಾಸುಗಳು ಕಳೆದಂತೆ ವೇಗವಾಗಿ ನೀರಿನಮಟ್ಟ ಏರಲು ಪ್ರಾರಂಭವಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರು ಮನೆಯಲ್ಲಿರುವ ಸರಕು, ಸಾಮಗ್ರಿಗಳನ್ನು ಸ್ಥಳಾಂತರಿಸಲು ಮುಂದಾಗಿದ್ದಾರೆ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೀರು ಪ್ರವೇಶಿಸಿರುವ ಮನೆಗಳಿಂದ ಸರಕು, ಸಾಮಾಗ್ರಿಗಳನ್ನು ಸಾಗಿಸಲು ಜಿಲ್ಲಾಡಳಿತದ ವತಿಯಿಂದ ನಾಲ್ಕು ದೋಣಿಗಳನ್ನು ಹೆಚ್ಚಿನ ಸೇವಕರನ್ನು ನೇಮಿಸಲಾಗಿದೆ. ಕುವೆಂಪು ಬಡಾವಣೆ ಹಾಗೂ ತಮ್ಮಯ್ಯಶೆಟ್ಡಿ ಬಡಾವಣೆಯ ಐದು ಮನೆಗಳು, ಸಾಯಿ ಬಡಾವಣೆಯ ಹತ್ತು ಮನೆಗಳು, ಇಂದಿರಾ ಬಡಾವಣೆಯ ಮೂರು ಮನೆಗಳು, ನಿಜಾಮುದ್ದೀನ್ ಬಡಾವಣೆಯ ಎರಡು ಮನೆಗಳಿಗೆ ನೀರು ನುಗ್ಗಿದೆ. ಜಿಲ್ಲಾಡಳಿತದ ವತಿಯಿಂದ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ಗಂಜಿ ಕೇಂದ್ರವನ್ನು ಸ್ಥಾಪಿಸಿದ್ದು, ತಾತ್ಕಾಲಿಕವಾಗಿ ಅವಶ್ಯಕ ಸೌಲಭ್ಯಗಳನ್ನು ಒದಗಿಸಿಸಲಾಗಿದೆ. ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಜಯ್ ಕುಮಾರ್ ಮಾತನಾಡಿ, ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನೀರು ಪ್ರವೇಶಿಸಿದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಅಲ್ಲದೇ ಸಂತ್ರಸ್ತರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗಿದ್ದು, ವಾಲ್ಮೀಕಿ ಭವನದಲ್ಲಿ ಗಂಜಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದರು. ಬಳ್ಳದ ಬಾವಿಯಿಂದ ನೀರು ಪ್ರವೇಶ: ವೀಕ್ಷಣೆಗಾಗಿ ಮುಗ್ಗಿಬಿದ್ದ ಸಾರ್ವಜನಿಕರು ಕೊಪ್ಪ ಸೇತುವೆಯ ಬಳ್ಳದ ಬಾವಿಯಿಂದ ನೀರು ಹರಿಯಲಾರಂಭಿಸಿದ್ದು, ನೀರಿನ ಹರಿವನ್ನು ವೀಕ್ಷಿಸಲು ಸಾರ್ವಜನಿಕರು ಮುಗಿಬಿದ್ದ ಘಟನೆ ನಡೆಯಿತು. ಸಾರ್ವಜನಿಕರ ಸುರಕ್ಷತಾ ದೃಷ್ಠಿಯಿಂದ ಸೇತುವೆ ಬಳಿ ಬ್ಯಾರಿಕೇಟ್ ಗಳನ್ನು ಅಳವಡಿಸಲಾಗಿದೆ. ಶಾಸಕ ಅಪ್ಪಚ್ಚುರಂಜನ್ ಭೇಟಿ ಕೊಡಗಿನಲ್ಲಿ ಹೆಚ್ಚುತ್ತಿರುವ ಮಳೆ ಹಿನ್ನಲೆ ಕುಶಾಲನಗರ ಹಲವು ಬಡಾವಣೆಗಳಿಗೆ ನೀರು ಪ್ರವೇಶಿಸಿದ್ದು, ಸ್ಥಳಕ್ಕೆ ಮಡಿಕೇರಿ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸಾರ್ವಜನಿಕರ ಸೇವೆಗೆ
ಅಧಿಕಾರಿಗಳು ಸದಾ ಕಾರ್ಯಪ್ರವೃತ್ತರಾಗಿರಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭ ಜಿ.ಪಂ ಸದಸ್ಯೆ ಕೆ.ಆರ್.ಮಂಜುಳಾ, ಉಪವಿಭಾಗಾಧಿಕಾರಿ ಜವರೇಗೌಡ, ತಹಶಿಲ್ದಾರ್ ಗೋವಿಂದ್ ರಾಜು, ಕಂದಾಯ ಪರಿವೀಕ್ಷಕ ಮಧುಸೂಧರ್ ಹಾಗೂ ಮತ್ತಿತರರು ಇದ್ದರು. ಡಿ.ಸಿ, ಎಸ್.ಪಿ, ಸಿ.ಇ.ಓ ಕುಶಾಲನಗರಕ್ಕೆ ಭೇಟಿ ಮಹಾ ಮಳೆಗೆ ಕುಶಾಲನಗರದ ಕೆಲವು ಬಡಾವಣೆಗಳಿಗೆ ನೀರು ಪ್ರವೇಶಿಸಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಟ್ಟಣದ ಸಾಯಿ ಬಡಾವಣೆ, ಕುವೆಂಪು ಬಡಾವಣೆ, ಇಂದಿತಾ ಬಡಾವಣೆ, ನಿಜಾಮುದ್ದೀನ್ ಬಡಾವಣೆಗೆ ಭೇಟಿ ನೀಡಿ ವೀಕ್ಷಣೆ ಮಾಡಿದ ಅವರು, ಸ್ಥಳೀಯ ಪಂಚಾಯಿತಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಾರ್ವಜನಿಕರಿಗೆ ಯಾವುದೇ ಅನಾಹುತಗಳು ಸಂಭವಿಸದಂತೆ ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಈಗಾಗಲೇ ಜಿಲ್ಲಾಡಳಿತದ ವತಿಯಿಂದ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದು, ಸಂತ್ರಸ್ತರಿಗೆ ವಾಲ್ಮೀಕಿ ಭವನದಲ್ಲಿ ಗಂಹಿ ಕೇಂದ್ರವನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರು ಆತಂಕಕ್ಕೊಳಗಾಗುವ ಅವಶ್ಯಕತೆಯಿಲ್ಲ. ಏನೇ ಸಮಸ್ಯೆಗಳಿದ್ದರೂ ಆಯಾ ಪಂಚಾಯಿತಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು. ನಂತರ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ಸ್ಥಾಪಿಸಿರುವ ಗಂಜಿ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭ ಉಪವಿಭಾಗಾಧಿಕಾರಿ ಜವರೇಗೌಡ, ತಹಶಿಲ್ದಾರ್ ಗೋವಿಂದರಾಜು, ಪ.ಪಂ ಮುಖ್ಯಾಧಿಕಾರಿ ಸುಜಯ್ ಕುಮಾರ್ ಹಾಗೂ ಇನ್ನಿತರರು ಹಾಜಿರಿದ್ದರು.









0 Post a Comment: