ಮಡಿಕೇರಿ : -ಶಾಸಕರಾದ ಆರ್.ಅಶೋಕ್, ಕೆ.ಜಿ.ಬೋಪಯ್ಯ, ಕೃಷ್ಣಪ್ಪ, ಸಂಸತ್ ಸದಸ್ಯರಾದ ಪ್ರತಾಪ್ ಸಿಂಹ, ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಇತರರು ಪ್ರವಾಹ ಪೀಡಿತ ಸಂತ್ರಸ್ತರಿಗೆ ಆಹಾರ ಹಾಗೂ ಬಟ್ಟೆ ಇತರೆ ಸಾಮಾಗ್ರಿಗಳನ್ನು ವಿತರಿಸಿದರು. ವಿರಾಜಪೇಟೆ ತಾಲ್ಲೂಕಿನ ಬೆಕ್ಕೆಸೊಡ್ಲೂರು, ಕಾನೂರು, ಬಾಳೆಲೆ, ನಿಟ್ಟೂರು, ಸಿದ್ದಾಪುರ ಮತ್ತಿತರ ಪರಿಹಾರ ಕೇಂದ್ರಗಳಿಗೆt ಶಾಸಕರು ಭೇಟಿ ನೀಡಿ ಆಹಾರ ಬಟ್ಟೆಯ ಕಿಟ್ ವಿತರಿಸಿದರು. ಸಂತ್ರಸ್ತರಿಗೆ ಸಹಾಯವಲ್ಲ, ನಮ್ಮ ಕರ್ತವ್ಯ ಎಂದು ಆರ್.ಅಕೋಶ್ ಅವರು ಹೇಳಿದರು. ಸದ್ಯ ಎರಡು ಲಾರಿಯಲ್ಲಿ ಆಹಾರ ಮತ್ತು ಅಗತ್ಯ ಬಟ್ಟೆ ಸಾಮಾಗ್ರಿಗಳನ್ನು ತರಲಾಗಿದೆ. ಕಳೆದ ವರ್ಷವೂ ಸಂತ್ರಸ್ತರ ಅಗತ್ಯ ನೆರವು ನೀಡಲಾಗಿತ್ತು ಎಂದು ಆರ್.ಅಶೋಕ್ ಅವರು ತಿಳಿಸಿದರು. ಸರ್ಕಾರದ ವತಿಯಿಂದ ಸಂತ್ರಸ್ತರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಮಳೆಹಾನಿ ಪ್ರದೇಶಗಳಿಗೆ ಆರ್. ಅಶೋಕ್ ಭೇಟಿ
Categories:
ಕೊಡಗು
Publish Date:
أغسطس 12, 2019
ಮಡಿಕೇರಿ : -ಶಾಸಕರಾದ ಆರ್.ಅಶೋಕ್, ಕೆ.ಜಿ.ಬೋಪಯ್ಯ, ಕೃಷ್ಣಪ್ಪ, ಸಂಸತ್ ಸದಸ್ಯರಾದ ಪ್ರತಾಪ್ ಸಿಂಹ, ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಇತರರು ಪ್ರವಾಹ ಪೀಡಿತ ಸಂತ್ರಸ್ತರಿಗೆ ಆಹಾರ ಹಾಗೂ ಬಟ್ಟೆ ಇತರೆ ಸಾಮಾಗ್ರಿಗಳನ್ನು ವಿತರಿಸಿದರು. ವಿರಾಜಪೇಟೆ ತಾಲ್ಲೂಕಿನ ಬೆಕ್ಕೆಸೊಡ್ಲೂರು, ಕಾನೂರು, ಬಾಳೆಲೆ, ನಿಟ್ಟೂರು, ಸಿದ್ದಾಪುರ ಮತ್ತಿತರ ಪರಿಹಾರ ಕೇಂದ್ರಗಳಿಗೆt ಶಾಸಕರು ಭೇಟಿ ನೀಡಿ ಆಹಾರ ಬಟ್ಟೆಯ ಕಿಟ್ ವಿತರಿಸಿದರು. ಸಂತ್ರಸ್ತರಿಗೆ ಸಹಾಯವಲ್ಲ, ನಮ್ಮ ಕರ್ತವ್ಯ ಎಂದು ಆರ್.ಅಕೋಶ್ ಅವರು ಹೇಳಿದರು. ಸದ್ಯ ಎರಡು ಲಾರಿಯಲ್ಲಿ ಆಹಾರ ಮತ್ತು ಅಗತ್ಯ ಬಟ್ಟೆ ಸಾಮಾಗ್ರಿಗಳನ್ನು ತರಲಾಗಿದೆ. ಕಳೆದ ವರ್ಷವೂ ಸಂತ್ರಸ್ತರ ಅಗತ್ಯ ನೆರವು ನೀಡಲಾಗಿತ್ತು ಎಂದು ಆರ್.ಅಶೋಕ್ ಅವರು ತಿಳಿಸಿದರು. ಸರ್ಕಾರದ ವತಿಯಿಂದ ಸಂತ್ರಸ್ತರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದರು.

0 Post a Comment: