ಕೊಡಗು ಜಿಲ್ಲೆಯ ಮಳೆ ವಿವರ:  ಹಾರಂಗಿ ನೀರಿನ ಮಟ್ಟ 


ಮಡಿಕೇರಿ :-ಗುರುವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ ೪.೩೯ ಮಿ.ಮೀ. ಕಳೆದ ವರ್ಷ ಇದೇ ದಿನ ೮.೩೫ ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ ೯೫೫.೦೮ ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ ೨೫೮೯.೮೩ ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ ೦.೨೦ ಮಿ.ಮೀ. ಕಳೆದ ವರ್ಷ ಇದೇ ದಿನ ೭.೭೫ ಮಿ.ಮೀ. ಜನವರಿಯಿಂದರ ಇಲ್ಲಿಯವರೆಗಿನ ಮಳೆ ೧೩೦೦.೮೮ ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ ೩೬೩೨.೪ ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ ೧.೫೦ ಮಿ.ಮೀ. ಕಳೆದ ವರ್ಷ ಇದೇ ದಿನ ೬.೬೩ ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮ ಳೆ ೯೮೭.೨ ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ ೨೦೮೦.೯ ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ ೧೧.೪೭ ಮಿ.ಮೀ. ಕಳೆದ ವರ್ಷ ಇದೇ ದಿನ ೧೦.೬೭ ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ ೫೭೭.೧೭ ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ ೨೦೫೬.೧೯ ಮಿ.ಮೀ. ಮಳೆಯಾಗಿತ್ತು. ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ ೦.೮೦, ಹುದಿಕೇರಿ ೯, ಸೋಮವಾರಪೇಟೆ ಕಸಬಾ ೧೦.೪೦, ಶನಿವಾರಸಂತೆ ೧೦, ಶಾಂತಳ್ಳಿ ೨೩, ಕೊಡ್ಲಿಪೇಟೆ ೨೫.೨೦, ಕುಶಾಲನಗರ ೦.೨೦ ಮಿ.ಮೀ. ಮಳೆಯಾಗಿದೆ. 

ಹಾರಂಗಿ ನೀರಿನ ಮಟ್ಟ 
 ಹಾರಂಗಿ ಜಲಾಶಯದ ನೀರಿನ ಮಟ್ಟ(೦೧-೦೮-೧೯) ವರದಿ ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨,೮೫೯ ಅಡಿಗಳು, ಇಂದಿನ ನೀರಿನ ಮಟ್ಟ ೨೮೩೪.೩೪ ಅಡಿಗಳು, ಕಳೆದ ವರ್ಷ ಇದೇ ದಿನ ೨೮೫೭.೮೫ ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ ೦.೦೦ ಮಿ.ಮೀ., ಕಳೆದ ವರ್ಷ ಇದೇ ದಿನ ೫.೪೦ ಮಿ.ಮೀ. ಇಂದಿನ ನೀರಿನ ಒಳಹರಿವು ೧೩೩೦ ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು ೪೯೮೦ ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ ೩೦ ಕ್ಯುಸೆಕ್. ನಾಲೆಗೆ ೧೩೩೫ ಕ್ಯುಸೆಕ್. ಕಳೆದ ವರ್ಷ ಇದೇ ದಿನ ನದಿಗೆ ೨೬೧೮, ನಾಲೆಗೆ ೮೦೦ ಕ್ಯುಸೆಕ್.
Previous Post
Next Post

0 Post a Comment: