ಟೈಮ್ಸ್ ಆಫ್ ಕೂರ್ಗ್
ಬೆಂಗಳೂರು: ಮಾಜಿ ಸಚಿವ ಹಾಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಟಿ ದೇವೇಗೌಡ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಅವರು ಇಂದು ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ವಿಷಯ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ ಚುನಾವಣಾ ಸಮಯದ ನೋವು ನನಗೆ ಮಾತ್ರ ಗೊತ್ತು, ಉಳಿದ ಮೂರುವರೆ ವರುಷವನ್ನು ನಾನು ನನ್ನ ಕ್ಷೇತ್ರದ ಜನತೆಯೊಂದಿಗೆ ಕಳೆಯುತ್ತೇನೆ ಹಾಗೂ ಇದಲ್ಲದೇ ನನ್ನ ರಾಜಕೀಯ ನಿವೃತ್ತಿ ಬಗ್ಗೆ ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ಮಾಹಿತಿ ನೀಡುತ್ತೇನೆ ಅಂತ ತಿಳಿಸಿದರು

0 Post a Comment: