ಟೈಮ್ಸ್ ಆಫ್ ಕೂರ್ಗ್
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಶ್ಲೇಷ ಮಳೆಯ ಆರ್ಭಟ ಬುಧವಾರ ಕೂಡ ಮುಂದುವರೆದಿದೆ. ಜಿಲ್ಲೆಯಲ್ಲಿ ಧಾರಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ಬುಧವಾರ ಶಾಲಾ -ಕಾಲೇಜುಗಳಿಗೆ ರಜೆ ನೀಡಿತ್ತು. ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದ್ದು, ಭಾಗಮಂಡಲ ಜಲಾವೃತ್ತವಾಗಿದೆ. ಜಿಲ್ಲಾಡಳಿತ ವತಿಯಿಂದ ಇಲ್ಲಿ ಬೋಟ್ ನಲ್ಲಿ ಜನರ ಸಾಗಿಸಲು ಎಲ್ಲಾ ವ್ಯವಸ್ಥೆ ಮಾಡಲಾಗಿದ್ದಾದರೂ ಇಂದು ಬೆಳಗ್ಗೆ ಜನರು ಬೋಟ್ ಗಾಗಿ ಕಾಯುತ್ತಿರುವ ದೃಶ್ಯ ಕಂಡುಬಂತು. ಅಲ್ಲದೇ ನಾಪೋಕ್ಲು-ಭಾಗಮಂಡಲ ಸಂಪರ್ಕ ಸ್ತಗಿತಗೊಂಡಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ಬಹುತೇಕ ಕಡೆ ವಿದ್ಯುತ್ ಸಂಪರ್ಕ ಕಡಮಾಡಿಕೊಡಬೇಕಾದ ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಕುಸಿಯುವ ಸಾಧ್ಯತೆ: ರಸ್ತೆ ಬದಿ ಜೋಡಿಸಿದ್ದ ಸ್ಯಾಂಡ್ ಬ್ಯಾಗ್ ಕುಸಿದಿದ್ದು,
ಒಳಭಾಗದಲ್ಲಿ ನೀರು ಬರುತ್ತಿದ್ದು, ಆಧುನಿಕ ತಂತ್ರಜ್ಞಾನ ಬಳಸಿ ಕಾಮಗಾರಿ ನಡೆಸಿದ್ರೂ ರಸ್ತೆ ಬದಿ ಜೋಡಿಸಿದ್ದ ಚೀಲಗಳು ಕುಸಿದಿದೆ. ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಒಂದು ವೇಳೆ ಮಳೆ ಮುಂದುವರೆದಲ್ಲಿ ಹೆದ್ದಾರಿ ಕುಸಿಯುವ ಸಾಧ್ಯತೆಯಿದೆ. ಏಕಮುಖ ಸಂಚಾರ ಮಾಡುವ ಸಾಧ್ಯತೆಯಿದೆ. ರೆಡ್ ಅಲರ್ ಹಿನ್ನೆಲೆ ಎರಡು ದಿನ ಶಾಲಾ ಕಾಲೇಜುಗಳಿಗೆ ರಜೆ: ಜಲ್ಲಾದ್ಯಂತ ಭಾರೂ ಮಳೆ ಮುಂದುವರೆದಿರುವುದರಿಂದ ಮತ್ತು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಜಾರಿಯಲ್ಲಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ದಿನಾಂಕ ೮ ಮತ್ತು ೯ ರಂದು ಶಾಲಾ -ಕಾಲೇಜು ಹಾಗೂ ಅಂಗನವಾಡಿಗಳಿಗೆ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ ಜಾತ್ ತಿಳಿಸಿದ್ದಾರೆ. ದಕ್ಷಿಣ ಕೊಡಗಿನಲ್ಲಿ ವರಣನ ಆರ್ಭಟ: ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಕಡಂಗ-ಕಕ್ಕಬ್ಬೆ ಸಂಪರ್ಕ ರಸ್ತೆಗೆ ಬೃಹತ್ ಆಕಾರದ ಮರಬಿದ್ದು ಕೆಲಕಾಲ ಸಂಚಾರದಲ್ಲಿ ವ್ಯತಯ ಉಂಟಾಗಿತ್ತು.
ವಿರಾಜಪೇಟೆಯಲ್ಲಿ ಮಂಗಳವಾರ ಸುರಿದ ಮಳೆಗೆ ಎರಡು ಮನೆಗಳು ಕುಸಿತ ವಿರಾಜಪೇಟೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಪೆರಂಬಾಡಿ ನವ ನಗರದ ನಿವಾಸಿ ಮೋಹನ್ ರವರ ಮನೆ ಗೋಡೆ ಕುಸಿದು 8ಲಕ್ಷ ನಷ್ಟ ವಾಗಿದೇ. ಇಂದಿರಾನಗರದ ನಿವಾಸಿ ವಾಸಂತಿರವರ ಮನೆ ಗೋಡೆ ಕುಸಿದು 2 ಲಕ್ಷದಷ್ಟು ನಷ್ಟವಾಗಿದೆ. ಸ್ಥಳಕ್ಕೆ ಶಾಸಕರಾದ ಕೆ.ಜಿ ಬೋಪಯ್ಯ ಹಾಗೂ ಜಿ.ಪಂ ಸದಸ್ಯರಾದ ಅಚ್ಚಪಂಡ ಮಹೇಶ್ ತಾ.ಪಂ ಸಧಸ್ಯರಾದ ಎಂ ಬಿ ಗಣೇಶ್ ಗ್ರಾ ಪಂ ಸದಸ್ಯರಾದ ಉದಯ ಕುಮಾರ್ ಶ್ರೀಮತಿ ಪರ್ವಾತಿ ಭೇಟಿ ನೀಡಿದರು. ವಿರಾಜಪೇಟೆಯ ಆರ್ಜಿಗ್ರಾಮದ ಸೇತುವೆ ಹಾಗೂ ರಸ್ತೆಯ ಮೇಲೆ ವಿಪರೀತ ನೀರು ಹರಿಯುತ್ತಿರುವುದರಿಂದ ಇಲ್ಲಿ ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ವಾಹನಗಳು ನೀರಿನ ಮಧ್ಯೆ ಸಿಲುಕಿ ಹಗ್ಗದಿಂದ ಎಳೆಯುವ ಸ್ಥಿತಿ ನಿರ್ಮಾಣವಾಗಿದೆ. ವಿರಾಜಪೇಟೆಯ ಭೇತ್ರಿ ಹೊಳೆಯ ನೀರಿನ ಮಟ್ಟ ಸೇತುವೆ ಮೇಲೆ ಉಕ್ಕಿ ಹರಿಯಲು ಸ್ವಲ್ಪವೇ ಬಾಕಿಯಿದೆ. ಹೀಗೆ ಮಳೆ ಮುಂದುವರಿದ್ದಲ್ಲಿ ಮಡಿಕೇರಿ ವಿರಾಜಪೇಟೆ ಪರ್ಯಾಯ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ವಿರಾಜಪೇಟೆಯ ಖಂಡಿಮಕ್ಕಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕುಸಿದಿದ್ದು, ಶಾಲೆಗೆ ರಾಜೆಯಿದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
















0 Post a Comment: