ಕೊಡಗಿನ ಜನತೆಯ ನಿರೀಕ್ಷೆಯ ವೇಗಗಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ:ಎಚ್.ಡಿ.ಕೆ 


ಮಡಿಕೇರಿ:ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಗೆ ತುತ್ತಾಗಿ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದ ಸಂತ್ರ1ಸ್ತರನ್ನು ಮಾಜಿ ಸಿ‌‌.ಎಂ ಕುಮಾರಸ್ವಾಮಿ ಭೇಟಿ ಮಾಡಿದರು ವಿರಾಜಪೇಟೆ ತಾಲ್ಲೂಕಿನ ಹೆಗ್ಗಳ ಪರಿಹಾರ ಕೇಂದ್ರ ಹಾಗೂ ಕೊಂಡಂಗೇರಿಯಲ್ಲಿನ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದರು. ಭಾರೀ ಕುಸಿತದಿಂದ ನಿರಾಶ್ರಿತರಾದ ಜನರ ಜೊತೆ ಮಾಜಿ ಸಿಎಂ ಸ್ವಾಂತನ ಹೇಳಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ಕೆ . ಕೊಡಗಿನಲ್ಲಿ ಜನರ ನಿರೀಕ್ಷೆಯ ವೇಗಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಕೇವಲ ಅಧಿಕಾರಿಗಳಿಂದಲೇ ಕೆಲಸ ಮಾಡಿಸಲು ಯಡಿಯೂರಪ್ಪ ಅವರಿಗೆ ಕಷ್ಟವಾಗುತ್ತದೆ. ಕಳೆದ ವರ್ಷ ಕೊಡಗಿನಲ್ಲಿ ಆದ ದುರ್ಘಟನೆಯನ್ನ ನಾವು ಸಮರ್ಥವಾಗಿ ನಿಭಾಯಿಸಿದ್ದೇವೆ. ಸೂಕ್ತ ಪರಿಹಾರ ನೀಡಿ, ನಿರಾಶ್ರಿತರ ತುರ್ತು ಖರ್ಚಿಗೆ ಹಣ ನೀಡಿದ್ದೇವು. ಕಳೆದ ವರ್ಷ ನಾವು ತೆಗೆದಿದ್ದ ವಿಶೇಷ ಅಕೌಂಟ್‌ನಲ್ಲೆ ಇನ್ನು 98 ಕೋಟಿ ಹಣ ಬಾಕಿ ಇದೆ. ಅದನ್ನಾದರೂ ತಕ್ಷಣ ಬಿಡುಗಡೆ ಮಾಡಿ ತುರ್ತು ಕ್ರಮ ಕೈಗೊಳ್ಳಬೇಕು. ಈ ಬಾರಿ ಕೊಡಗಿನ ಅನಾವುತಗಳ ಬಗ್ಗೆ ಸರ್ಕಾರ ಹೆಚ್ಚು ಗಮನ ಹರೆಸಿಲ್ಲ. ಜವಬ್ದಾರಿ ಕೊಟ್ಟು ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಬೇಕು. ವಿರಾಜಪೇಟೆಯಲ್ಲಿ ಮಾಜಿ ಸಿಎಂ ಹೆಚ್‌ಡಿಕೆ ಹೇಳಿಕೆ.

Previous Post
Next Post

0 Post a Comment: