ಅಂಕಾರ: ಒಂದು ಲಕ್ಷದಷ್ಟು ಸಿರಿಯದ ಜನರಿಗೆ ಟರ್ಕಿ ಪೌರತ್ವ ನೀಡಿದೆ. ಶುಕ್ರವಾರ ಟರ್ಕಿಯ ಗೃಹ ಸಚಿವ ಇದನ್ನು ತಿಳಿಸಿದ್ದು 92,280 ಸಿರಿಯನ್ನರಿಗೆ ನಾಗರಿಕತೆ ನೀಡಲಾಗಿದೆ. ಇವರಲ್ಲಿ 45,280 ಮಂದಿ ಮಕ್ಕಳು. ಇವರಲ್ಲಿ ಹೆಚ್ಚಿನವರು ಅಧ್ಯಾಪಕರು, ಇಂಜಿನೀಯರ್ ಗಳೂ ಇದ್ದಾರೆ. ಅವರಿಗೆ ಬದುಕುವ ವಾತಾವರಣವನ್ನು ಅವರೇ ಕಂಡು ಕೊಳ್ಳಲಿದ್ದಾರೆ ಎಂದು ಗೃಹ ಸಚಿವ ಸುಲೈಮಾನ್ ಸೊಯ್ಲು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಟರ್ಕಿಯಲ್ಲಿ ಈಗ 5,47,000 ಸಿರಿಯನ್ನರು ಇದ್ದಾರೆ. ಅವರಿಗೆ ಈ ಹಿಂದೆಯೇ ಪೌರತ್ವ ನೀಡಲಾಗಿದೆ. ವಿಶ್ವವಿದ್ಯಾನಿಲಯದಲ್ಲಿ ಕಲಿಯಲು ಬಂದವರು, ವ್ಯಾಪಾರ ಮಾಡಲು ಬಂದವರಿಗೆ ಈಗ ಪೌರತ್ವ ನೀಡಲಾಗಿದೆ. ಅಫ್ಘಾನಿಸ್ಥಾನದಿಂದ ಮತ್ತು ಅನಧಿಕೃತವಾಗಿ ವಲಸೆ ಬಂದ 72,000 ಮಂದಿಯಲ್ಲಿ 29,000 ಮಂದಿ ಮಾತೃದೇಶಕ್ಕೆ ಮರಳಿದ್ದಾರೆ. ಜುಲೈವರೆಗೆ 177,654 ಮಂದಿಅನಧಿಕೃತ ವಲಸೆಗಾರರ ಉಪಸ್ಥಿತಿಯನ್ನು ರಜಿಸ್ತ್ರೀ ಮಾಡಲಾಗಿತ್ತೆಂದು ಅವರು ಹೇಳಿದರು.
1 ಲಕ್ಷದಷ್ಟು ಸಿರಿಯನ್ ಪ್ರಜೆಗಳಿಗೆ ಪೌರತ್ವ ನೀಡಿದ ಟರ್ಕಿ
Categories:
Featured
ವಿದೇಶ ಸುದ್ದಿ
Publish Date:
أغسطس 06, 2019
ಅಂಕಾರ: ಒಂದು ಲಕ್ಷದಷ್ಟು ಸಿರಿಯದ ಜನರಿಗೆ ಟರ್ಕಿ ಪೌರತ್ವ ನೀಡಿದೆ. ಶುಕ್ರವಾರ ಟರ್ಕಿಯ ಗೃಹ ಸಚಿವ ಇದನ್ನು ತಿಳಿಸಿದ್ದು 92,280 ಸಿರಿಯನ್ನರಿಗೆ ನಾಗರಿಕತೆ ನೀಡಲಾಗಿದೆ. ಇವರಲ್ಲಿ 45,280 ಮಂದಿ ಮಕ್ಕಳು. ಇವರಲ್ಲಿ ಹೆಚ್ಚಿನವರು ಅಧ್ಯಾಪಕರು, ಇಂಜಿನೀಯರ್ ಗಳೂ ಇದ್ದಾರೆ. ಅವರಿಗೆ ಬದುಕುವ ವಾತಾವರಣವನ್ನು ಅವರೇ ಕಂಡು ಕೊಳ್ಳಲಿದ್ದಾರೆ ಎಂದು ಗೃಹ ಸಚಿವ ಸುಲೈಮಾನ್ ಸೊಯ್ಲು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಟರ್ಕಿಯಲ್ಲಿ ಈಗ 5,47,000 ಸಿರಿಯನ್ನರು ಇದ್ದಾರೆ. ಅವರಿಗೆ ಈ ಹಿಂದೆಯೇ ಪೌರತ್ವ ನೀಡಲಾಗಿದೆ. ವಿಶ್ವವಿದ್ಯಾನಿಲಯದಲ್ಲಿ ಕಲಿಯಲು ಬಂದವರು, ವ್ಯಾಪಾರ ಮಾಡಲು ಬಂದವರಿಗೆ ಈಗ ಪೌರತ್ವ ನೀಡಲಾಗಿದೆ. ಅಫ್ಘಾನಿಸ್ಥಾನದಿಂದ ಮತ್ತು ಅನಧಿಕೃತವಾಗಿ ವಲಸೆ ಬಂದ 72,000 ಮಂದಿಯಲ್ಲಿ 29,000 ಮಂದಿ ಮಾತೃದೇಶಕ್ಕೆ ಮರಳಿದ್ದಾರೆ. ಜುಲೈವರೆಗೆ 177,654 ಮಂದಿಅನಧಿಕೃತ ವಲಸೆಗಾರರ ಉಪಸ್ಥಿತಿಯನ್ನು ರಜಿಸ್ತ್ರೀ ಮಾಡಲಾಗಿತ್ತೆಂದು ಅವರು ಹೇಳಿದರು.

0 Post a Comment: