ಮೌನತುಲ್ ಇಸ್ಲಾಂ ಮದರಸದಲ್ಲಿ ಸಾಹಿತ್ಯ ಸಮಾಜ ಅಸ್ತಿತ್ವಕ್ಕೆ.  


ಟೈಮ್ಸ್ ಆಫ್ ಕೂರ್ಗ್ 
ಚೆಟ್ಟಳ್ಳಿ: ಸಮೀಪದ ಪೊನ್ಮತ್ ಮೊಟ್ಟೆಯ ಮೌನತುಲ್ ಇಸ್ಲಾಂ ಮದರಸದಲ್ಲಿ ಸಾಹಿತ್ಯ ಸಮಾಜವನ್ನು ರೂಪಿಸಿ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ಮದರಸ ಮುಖ್ಯೋಪಾಧ್ಯಾಯರಾದ ಸಹದ್ ಫೈಝಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಮದರಸ ಅಧ್ಯಾಪಕ ಮುಹಯದ್ದೀನ್ ಸಖಾಫಿ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಸಾಮಾಜಿಕ ಚಟುವಟಿಕೆಗಳಲ್ಲಿ ಮುಂದೆ ಬರಬೇಕು ಎಂದರು. ಜಲಾಲ್ ಉಸ್ತಾದ್ ಮಾತನಾಡಿ ಸಾಹಿತ್ಯ ಸಮಾಜದಿಂದ, ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಕಲಾ , ಸಾಂಸ್ಕೃತಿಕ ರಂಗದಲ್ಲಿ ಮುಂದೆ ಬರಬೇಕು ಎಂದು ಹೇಳಿದರು. 


ಕಳೆದ ವಾರ ನಿಧನರಾದ ಪಂಡಿತ ವಿದ್ವಾಂಸರಾದ ಅಬ್ಬಾಸ್ ಉಸ್ತಾದ್ ಅವರ ಅನುಸ್ಮರಣೆ ಕಾರ್ಯಕ್ರಮವು ಮಹಲ್ ಖತೀಬರಾದ ಶಾದುಲಿ ಫೈಝಿ ಅವರ ನೇತೃತ್ವದಲ್ಲಿ ನಡೆಯಿತು. ಮದರಸ ಲೀಡರ್ ಆಗಿ ಶಿಬಿಲ್, ಅಫೀಪ ವಿ.ಎಮ್ ಪರಿಸರ ಲೀಡರ್ ಆಗಿ ಆಯ್ಕೆಯಾದರು. ಸವಾದ್ ಕಾರ್ಯದರ್ಶಿ, ಕೋಶಾಧಿಕಾರಿಯಾಗಿ ಸಿದ್ದೀಖ್ , ಉಪಾಧ್ಯಕ್ಷರಾಗಿ ಮಿದ್ಲಾಜ್, ಸಹ ಕಾರ್ಯದರ್ಶಿಯಾಗಿ ಫಾರೂಖ್ ಆಯ್ಕೆಯಾಗಿದ್ದಾರೆ.
Previous Post
Next Post

0 Post a Comment: