ಆಗಸ್ಟ್ 04 ರಂದು "ಅಂತಾರಾಷ್ಟ್ರೀಯ ಫ್ರೆಂಡ್ಸ್ ಶಿಫ್ ಡೇ" 


ಸಂಪಾದಕೀಯ ಟೈಮ್ಸ್ ಆಫ್ ಕೂರ್ಗ್ 
 ಅಪ್ಪನಿಗೊಂದು ದಿನ, ಅಮ್ಮನಿಗೊಂದು ದಿನ,ಪ್ರೇಮಿಗಳಿಗೊಂದು ದಿನ ,ಡಾಕ್ಟರ್ ಗೊಂದು ದಿನ ಇದ್ದ ಮೇಲೆ ಗೆಳೆತನಕ್ಕೊಂದು ದಿನ ಬೇಡವೇ? ಹೌದು ಪ್ರತೀ ವರ್ಷ ಆಗಸ್ಟ್ ಮೊದಲ ಭಾನುವಾರವನ್ನು "ಫ್ರೆಂಡ್ ಶಿಪ್ ಡೇ " ಎಂದು ಆಚರಿಸಲಾಗುತ್ತಿದೆ. ಈ ದಿನಚಾರಣೆ ಆರಂಭಗೊಂಡಿದ್ದು 1935 ರ ಇಸವಿಯಿಂದ. ಅಮೇರಿಕ ಸಂಸತ್ ಆಗಸ್ಟ್ ಮೊದಲ ಭಾನುವಾರವನ್ನು "ಫ್ರೆಂಡ್ ಶಿಪ್ ಡೇ" ಎಂದು ಘೋಷಿಸಿತು. ಅಲ್ಲಂದೀಚೆಗೆ ಭಾರತ, ವಿದೇಶಗಳಲ್ಲಿ "ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಫ್ರೆಂಡ್ಸ್ ಶಿಪ್ ಡೇ ಕ್ರೇಜ್ ಕಳೆದ ಐದಾರು ವರ್ಷಗಳಿಂದ ನಮಗೆ ಕಾಣುತ್ತಿದೆ. ಒಂದು ರೀತಿಯಲ್ಲಿ ಫ್ರೆಂಡ್ಸ್ ಶಿಪ್ ಡೇ ಎನ್ನುವುದು ಮಾರ್ಕೆಟ್ ಆಗಿ ಬಿಟ್ಟಿದೆ ಎಂದರೆ ತಪ್ಪಾಗಲಾರದು. ಇಂದಿನ ಕಂಪ್ಯೂಟರ್ ಯುಗದಲ್ಲಿ ಗೆಳೆತನಕ್ಕೆಲ್ಲಿದೆ ಬೆಲೆ. ಹಿಂದಿನ ಕಾಲದಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ತಿಳಿಯಬೇಕೆಂದರೆ ಆತನ ಸ್ನೇಹಿತನನ್ನು ನೋಡಿದ್ರೆ ಸಾಕು. ಸ್ನೇಹಿತರನ್ನು ಹುಡುಕಿಕೊಳ್ಳುವಾಗ ಎಚ್ಚರವಹಿಸಬೇಕೆ? ಅಳೆದು ತೂಗಿ ಮಾಡಿಕೊಳ್ಳುವ ಸಂಬಂಧ ಮದುವೆಯಾಗುತ್ತದಯೇ, ಹೊರತು ಸ್ನೇಗವಾಗಲು‌ ಹೇಗೆ ಸಾಧ್ಯ. ವರ್ಷಗಳ ನಂತರ ಹಳೆಯ ಸ್ನೇಹಿತ ಆಕಸ್ಮಿಕವಾಗಿ ಸಿಕ್ಕಿದಾಗ ಹಳೆಯ ನೆನಪುಗಳನ್ನು ಕೆಣಕಿದಾಗ ಸ್ವರ್ಗಕ್ಕೆ ಕಿಚ್ಚು ಹಚ್ಚುವಷ್ಟು ಉಲ್ಲಾಸ. ಶಾಲಾ ದಿನಗಳಿಗೆ ಜಾರುವುದೇ ಒಂದು‌ ಮಧುರ ಅನುಭೂತಿ. ಶಾಲೆಯ ಉಪ್ಪಿಟ್ಟು, ಸ್ವಾತಂತ್ರ್ಯ ದಿನಾಚರಣೆಯ ಧ್ವಜ‌ ಹಿಡಿದು ಊರಲ್ಲಿ ಮೆರವಣಿಗೆ ಹೋಗಿದ್ದು, ಸಂಭ್ರಮಿಸಿದ್ದು, ಹೇಗೆ ನಮಗೆ ಮರೆಯಲು ಸಾಧ್ಯ ಹೇಳಿ? ಒಳ್ಳೆಯ ಸ್ನೇಹಿತನೊಬ್ಬ ಜತೆಯಲ್ಲಿದ್ದರೆ ಏಳು ಬೆಟ್ಟಗಳು ಹತ್ತಿಳಿದು, ಸಪ್ತ ಸಾಗರಗಳ ಈಜುವುದು ಕಷ್ಟವಾಗಲಾರದು. ಇಂದು ಸ್ನೇಹವು ಮಾರಾಟದ ಸರಕು. ಸ್ನೇಹಿತರು ಬೇಕಾ? ಸ್ನೇಹಿತರಿಗಾಗಿ ಕಾಲ್ ಮಾಡಿ ಮಾಡಿ, ಚಾಟ್ ಎಂಬಿತ್ಯಾದಿ ಜಾಹೀರಾತುಗಳು ಅಚ್ಚರಿಯಾಗೇನು ಇಂದು ಉಳಿದಿಲ್ಲ. ಕಾಲವನ್ನು ತಡಿಯೋರ್ ಯಾರು ಇಲ್ಲ ಎಂಬಂತೆ ದಿನಗಳು ಬದಲಾಗಿದೆ. ಆದರೂ ಸ್ನೇಹದ ಮಹತ್ವ, ಸ್ನೇಹದ ದಾಹ ಮನುಷ್ಯರಲ್ಲಿ ಹಿಂಗಿಲ್ಲ. ಹೀಗಾಗಿಯೇ ವ್ಯಾಟ್ಸ್ ಅಪ್, ಫೇಸ್ ಬುಕ್, ಟ್ವಿಟರ್ ನಂತಹ ಸೋಷಿಯಲ್‌ ನೆಟ್ವರ್ಕ್ ನಂತಹ ಜನಪ್ರಿಯ. ಇಂದು ಚಾಟಿಂಗ್ ಫ್ರೆಂಡ್ಸ್, ಫೋನ್ ಫ್ರೆಂಡ್ಸ್ ಗಳ ಕಾಲ. ಸ್ನೇಹ ಅರಳಲು ಯಾವ ಕಾರಣಗಳು ಬೇಕಾಗಿಲ್ಲ.ಅವನ್ಯಾರೋ, ಇವನ್ಯಾರೋ, ಗೆಳೆಯರಾಗುವ ಮುನ್ನ ಅಪರಿಚಿತರು. ನಂತರ ಫೆವಿಕಾಲ್ ಹಾಕಿದಂತೆ ಅಂಟಿಕೊಳ್ಳುತ್ತಾರೆ. ಪರಿಚಯಕ್ಕೆ ಕಾರಣಗಳು ಇರುತ್ತದೆಯೇ, ಹೊರತು ಗೆಳೆತನಕ್ಕಲ್ಲ. ಅದು ಗೆಳೆತನವಾಗಲು ಹೇಗೆ ಸಾಧ್ಯ? ಸ್ನೇಹದ ಬಗ್ಗೆ ದಿನಕ್ಕೆ ಹತ್ತು ಎಸ್ ಎಮ್ ಎಸ್ ಕಳಿಸುವ ವ್ಯಕ್ತಿಯ ಬಳಿ ಒಂದೇ ಒಂದು ಸಹಾಯ ನೋಡಿ ಬಣ್ಣ ಬಯಲಾಗುತ್ತದೆ, ಆತ ನಿಮಗಾಗಿ ಯಾರೋ ಕಳುಹಿಸಿದ ಮೆಸೇಜ್ ಗಳನ್ನು ಫೋರ್ವಡ್ ಮಾಡ್ತಾರೆ. ಎಸ್.ಎಮ್.ಎಸ್ ಸೇವೆ ಅವರ ಮೊಬೈಲ್ ನಲ್ಲಿ ಉಚಿವಿದ್ದರೆ ಮಾತ್ರ ಈ ಸೇವೆ ಮುಂದುವರೆಯುತ್ತದೆ. ಇವರನ್ನು ಎಸ್.ಎಮ್.ಎಸ್ ಗೆಳೆಯ ಎನ್ನೋಣವೇ?.... ಎಲ್ಐಸಿ ಪಾಲಿಸಿಗಾಗಿ ಗಂಟು ಬೀಳುವ ಗೆಳೆಯರಿದ್ದಾರೆ. ನಮ್ಮ ಪಾಲಿಸಿ ಜೊತೆಗೆ ಆಪ್ತರ ಪಾಲಿಸಿ ಕೂಡ ಕೊಡಿಸಬೇಕಂತೆ. ಇವರನ್ನು ಎಲ್ಐಸಿ ಗೆಳೆಯ ಅನ್ನೋಣವೇ? ಸ್ನೇಹ ಮಾಡುವುದು ಸುಲಭ , ಅದನ್ನು ಉಳಿಸಿಕೊಳ್ಳುವುದು ತುಂಬಾ ಕಷ್ಟ ಎನ್ನುತಾರೆ ಹಿರಿಯರು. ನಿಜ ಹೇಳಿ ನಿಮ್ಮ ಗೆಳೆಯನ್ನು ಭೇಟಿ ಮಾಡಿ ಎಷ್ಟು ದಿನ ಅಥವಾ ವರ್ಷವಾಯಿತು ಎಂದು? ಅಟ್ ಲೀಸ್ಟ್ ಫೀನ್ ಮಾಡಿ ಎಷ್ಟು ದಿನವಾಯಿತು ಎಂದು. ಯೋಚಿಸಿ ಗೆಳೆತನ ಮುಂದುವರೆಸಿ ನನಗೆ ಇದುವರೆಗೆ ಆತ ನನ್ನ ಚಡ್ಡಿದೋಸ್ತ್, ಈತ ನನ್ನ ಕುಚುಕು ಗೆಳೆಯ ಎನ್ನಲು ಯಾರೂ ಇಲ್ಲ,‌ಈ ಮಾತು ನಂಬಲು ಸಾಧ್ಯವಿಲ್ಲವಾದ್ರೂ ಇದು ವಾಸ್ತವ. ನನ್ನ ಪಾಲಿಗೆ ಪತ್ರಿಕೆಗಳು, ಹಾಗೂ ಪುಸ್ತಕಗಳೇ ನನ್ನ ಗೆಳೆಯರು. ಎಲ್ಲರಿಗೂ "ಅಂತಾರಾಷ್ಟ್ರೀಯ ಫ್ರೆಂಡ್ಸ್ ಶಿಪ್ ಡೇ" ಶುಭಾಶಯಗಳು....
Previous Post
Next Post

0 Post a Comment: