ಬಕ್ರೀದ್ ಸಂಭ್ರಮ ಬೇಡ: ಸಂತ್ರಸ್ತರಿಗೆ ಸಹಾಯ ಮಾಡೋಣ ಬನ್ನಿ....... 


ಸಂಪಾದಕೀಯ / ಕೆ ಎಂ ಇಸ್ಮಾಯಿಲ್ ಕಂಡಕ್ಕರೆ 
ಒಂದು ವಾರದ ಹಿಂದೆ ಕೊಡಗಿನಲ್ಲಿ ಮಳೆಯೇ ಇಲ್ಲ, ನಾಟಿ ಕೆಲಸ ಮಾಡಲು ನೀರಿಲ್ಲ, ಮಳೆ ಬರದಿದ್ದರೆ ಕುಡಿಯಲೂ ನೀರಿಗೆ ಹಾಹಕಾರ ಪಡಬೇಕಾಗುಂತೆ ಎಂದು ನಾವೆಲ್ಲರೂ ಮಾತನಾಡುತ್ತಿತ್ತು... ಒಂದು ವಾರ ಕಳೆದಿದೆ, ಇಡೀ ಜಿಲ್ಲೆಯ ಚಿತ್ರಣವೇ ಬದಲಾಗಿದೆ. ಮಹಾ ಮಳೆ ಮತ್ತೊಮ್ಮೆ ಕೊಡಗಿನ ಜನತೆಗೆ ಕಣ್ಣೀರು ತಂದಿದೆ.. ಏಳಕ್ಕೂ ಅಧಿಕ ಜನರು ಮಣ್ಣು ಕುಸಿತಕ್ಕೆ ಸಿಲುಕಿ ಸಾವನ್ನಪ್ಪಿದರೆ. ಎಂಟಕ್ಕೂ ಅಧಿಕ ಜನರು ಮಣ್ಣಿನಡಿ ಸಿಲುಕಿದ್ದಾರೆ. ಹಲವು ಜನರ ಮನೆಗಳು ನೀರಿನಡಿ ಸಿಲುಕಿ, ನೆಲಸಮವಾಗಿದೆ‌. ಎಲ್ಲವನ್ನೂ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಮುಂದೇನು ಮಾಡಬೇಕು ಎಂದು ದೋಚದೆ ಅಸಹಾಯಕರಾಗಿ ನಿಂತಿದ್ದಾರೆ. ಅದರಲ್ಲಿ ನಮ್ಮ ಸ್ನೇಹಿತರು, ಕುಟುಂಬದವರು ಕೂಡ ಇದ್ದಾರೆ. ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಹಬ್ಬವು ನಾಡಿನಾದ್ಯಂತ ಇಂದು( ಸೋಮವಾರ) ಆಚರಿಸಲಾಗುತ್ತಿದೆ. ಈ ವರ್ಷ ‌...ಬಕ್ರೀದ್ ಹಬ್ಬದ ಸಂಭ್ರಮ ನಮಗೇ ಬೇಡ,.... ಮಾನವೀಯತೆ ದೊಡ್ಡದು ಎಲ್ಲವನ್ನೂ ಕಳೆದುfಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಸಹಾಯ ಮಾಡೋಣ ಬನ್ನಿ..... ನಾವೆಲ್ಲರೂ ಹಬ್ಬವನ್ನು ಸಂಭ್ರಮದಿಂದ ಆಚರಿಸೋದುt ಸರಿಯೇ ಎಂದು ಚಿಂತಿಸಬೇಕಿದೆ. ನಾವೆಲ್ಲರೂ ಹಬ್ಬದಲ್ಲಿ ಬಾಡೂಟ ಮಾಡುವಾಗ ಸಂತ್ರಸ್ತರ ಮುಖವನ್ನು ಒಮ್ಮೆ ಯೋಚಿಸಿಬೇಕಾಗಿದೆ. ಬಕ್ರೀದ್ ಹಬ್ಬದ ಪ್ರಾರ್ಥನೆಯಲ್ಲಿ ಸಂತ್ರಸ್ತರಿಗಾಗಿ ವಿಶೇಷ ಪ್ರಾರ್ಥನೆ ಮಾಡೋಣ, ಅಲ್ಲದೇ ಸಂತ್ರಸ್ತರಿಗಾಗಿ ನಮ್ಮಿಂದಾಗುವ ಸಹಾಯ ಮಾಡೋಣ ಬನ್ನಿ ಗೆಳೆಯರೇ.... ಇಂದು ಅವರಿಗೆ ಬಂದ ಪರಿಸ್ಥಿತಿ ನಾಳೆ ನಮಗೋ ಬರಬಹುದು ಅಲ್ವೇ?.... ...
Previous Post
Next Post

0 Post a Comment: