BSNL ನಿಂದ ಕೊಡಗು ಸಹಿತ 9ಜಿಲ್ಲೆಗಳಿಗೆ ಉಚಿತ ಕರೆ ಡಾಟಾ


ಬೆಂಗಳೂರು: ನೆರಪೀಡಿತ ಪ್ರದೇಶಗಳಾಗಿರುವ ಕರಾವಳಿ , ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗದ ಜಿಲ್ಲೆಯಲ್ಲಿರುವ ತನ್ನ ಗ್ರಾಹಕರಿಗೆ ಉಚಿತ ಡಾಟಾ ಮತ್ತು ಕರೆಯನ್ನು ಸರ್ಕಾರಿ ಸ್ವಾಮ್ಯದ BSNL ನೀಡಲು ನಿರ್ಧರಿಸಿದೆ.ಕೊಡಗು , ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಬೆಳಗಾವಿ, ಬಾಗಲಕೋಟೆ , ಯಾದಗಿರಿ ಹಾಗೂ ಧಾರವಾಡ ಜಿಲ್ಲೆಯ ಗ್ರಾಹಕರಿಗೆ ಆಗಸ್ಟ್ 10ರಿಂದ (ಶನಿವಾರ) ಮುಂದಿನ ಒಂದು ವಾರದವರೆಗೆ ಉಚಿತ ಸೇವೆಯನ್ನು ಘೋಷಿಸಿದೆ.BSNL ನಿಂದ BSNL ಗೆ ಅನ್ ಲಿಮಿಟೆಡ್ ಉಚಿತ ಕರೆ ಹಾಗೂ BSNL ನಿಂದ ಬೇರೆ ನೆಟ್ವರ್ಕ್ ಗೆ 20ನಿಮಿಷಗಳ ಉಚಿತ ಕರೆ ಹಾಗೂ 100 ಮೆಸೇಜ್ ಮತ್ತು 1GB ಡಾಟಾ ದಿನನಿತ್ಯ ಉಚಿತವಾಗಿ ನೀಡಲಿದೆ.ಹೆಚ್ಚಿನ ಮಾಹಿತಿಗಾಗಿ ದೂ/1503/18001801503ಗೆ ಸಂಪರ್ಕಿಸಲು ಕೋರಲಾಗಿದೆ.ಹಾನಿಗೊಳಗಾದ ಟವರ್ ಗಳ ದುರಸ್ತಿ ಕಾರ್ಯ ನಡೆಯುತ್ತಿದೆ.
Previous Post
Next Post

0 Post a Comment: