50ನೇ ವರ್ಷಾಚರಣೆಯಲ್ಲಿ ಕೆನರಾ ಬ್ಯಾಂಕ್ ಅಮ್ಮತ್ತಿ ಶಾಖೆ


ಟೈಮ್ಸ್ ಆಫ್ ಕೂರ್ಗ್ 
ವರದಿ : ತೌಸಿಫ್ ಅಹ್ಮದ್ ಅಮ್ಮತ್ತಿ
ಅಮ್ಮತ್ತಿ: ಕೆನರಾ ಬ್ಯಾಂಕ್ ಅಮ್ಮತ್ತಿ ಶಾಖೆಯ 50 ವರ್ಷಾಚರಣೆಯನ್ನು ಗ್ರಾಹಕರಿಗೆ ಸಿಹಿ ಹಂಚುವ ಮೂಲಕ ಆಚರಿಸಲಾಯಿತು. ವಿಶೇಷ ಪೂಜೆ ಸಲ್ಲಿಸಿ ಕೇಕ್ ಕತ್ತರಿಸುವ ಮೂಲಕ ಶಾಖೆಯ ವ್ಯವಸ್ಥಾಪಕರಾದ ರಾಹುಲ್ ನಾಥ್ , ಮಾಜಿ ಸಿಬ್ಬಂದಿಗಳಾದ ಎಂ.ಬಿ ಗಣೇಶ್ , ಹ್ಯಾರಿ , ಸ್ಟಾನ್ ಡಿ. ಫಿಲಿಪ್ ಸೇರಿದಂತೆ ಹಲವು ಗಣ್ಯರು ಸಂಭ್ರಮಿಸಿದ್ರು. 50ವರ್ಷಗಳಲ್ಲಿ ಜನಸಾಮಾನ್ಯರ ಸಹಕಾರದಿಂದ ಸಾಧನೆಯಲ್ಲಿ ಜಿಲ್ಲೆಗೆ 2ನೇ ಅತ್ಯುತ್ತಮ ಶಾಖೆಯಾಗಿ ಪ್ರಶಸ್ತಿ ಪಡೆದ ಬಗ್ಗೆ ವ್ಯವಸ್ಥಾಪಕ ರಾಹುಲ್‌ನಾಥ್ ಸಂತಸ ವ್ಯಕ್ತ ಪಡಿಸಿದರು. ಕುಟ್ಟಂಡ ಕೃಷ್ಣ ಅವರು ಮಾತನಾಡಿ ಜನರ ಸಹಕಾರ ಹಾಗು ಇಲ್ಲಿಯ ಸಿಬ್ಬಂದಿಗಳ ಪ್ರಯತ್ನದಿಂದ ಶಾಖೆಯು 50 ವರ್ಷ ಪೂರೈಸಿರುವುದು ಮತ್ತು ಸಾಧನೆಯಲ್ಲಿ ಜಿಲ್ಲೆಗೆ 2 ನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ ಎಂದರು. ಈ ಸಂದರ್ಭ ಶಾಖಾ ಸಿಬ್ಬಂದಿಗಳಾದ ಭಾಸ್ಕರ್.ಮಹೇಶ್.ಸಾಯಿ ಈಶ್ವರ್.ಶ್ರೀಕಾಂತ್ ಜೋಯಪ್ಪ. ಸೇರಿದಂತೆ ಗ್ರಾಹಕರು ಉಪಸ್ಥಿತರಿದ್ದರು.

Previous Post
Next Post

0 Post a Comment: