ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರ ಸುರಿದ ಮಹಾ ಮಳೆಗೆ ಮೃತಪಟ್ಟವರ ಸಂಖ್ಯೆ ಸೋಮವಾರ ಒಂಭತ್ತಕ್ಕೇರಿದೆ. ಶುಕ್ರವಾರ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಸಮೀಪದ ಕೋರಂಗಾಲದಲ್ಲಿ ಗುಡ್ಡ ಕುಸಿತಕ್ಕೆ ಸಿಲುಕಿ ೫ ಜನ ಮೃತಪಟ್ಟಿದ್ದರು. ಅಲ್ಲದೇ ವಿರಾಜಪೇಟೆ ಹೆಗ್ಗಳ ಸಮೀಪ ತೋರ ಗ್ರಾಮದಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಇಬ್ಬರು ಮೃತಪಟ್ಟಿದ್ದಲ್ಲದೇ ಎಂಟಕ್ಕೂ ಹೆಚ್ಚು ಕಣ್ಮರೆಯಾಗಿದ್ದರು. ತೋರದಲ್ಲಿ ಸತತ ನಾಲ್ಕು ದಿನಗಳ ಕಾರ್ಯಚರಣೆ ನಂತರ ಇಂದು ಒಂದು ಮೃತ ದೇಹ ಪತ್ತೆಯಾಗಿದೆ. ಮಣ್ಣು ಕುಸಿತದಲ್ಲಿ ಕಣ್ಮರೆಯಾದವರ ಶೋಧ ಕಾರ್ಯಚರಣೆ ಮುಂದುವರೆದಿದೆ. ಪ್ರವಾಹಕ್ಕೆ ಸಿಲುಕಿ ಕಟ್ಟೆಮಾಡು ಪರಂಬು ಪೈಸಾರಿಯಲ್ಲಿ ಕುಂಞಿಣ್ಣ(೬೮) ಎಂಬುವವರ ಮೃತ ದೇಹ ಸಹಾ ಇಂದು ಪತ್ತಯಾಗಿದೆ. ಪ್ರವಾಹ ಸಂದರ್ಭ ಮನೆಯೊಳಗೆ ಇದ್ದ ಕುಂಞಿಣ್ಣ ಅವರ ಮೃತ ದೇಹ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಡಗು ಮಹಾ ಮಳೆಗೆ ಬಲಿಯಾದವರ ಸಂಖ್ಯೆ 9ಕ್ಕೆ ಏರಿಕೆ
Categories:
Featured
ಕೊಡಗು
Publish Date:
August 12, 2019
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರ ಸುರಿದ ಮಹಾ ಮಳೆಗೆ ಮೃತಪಟ್ಟವರ ಸಂಖ್ಯೆ ಸೋಮವಾರ ಒಂಭತ್ತಕ್ಕೇರಿದೆ. ಶುಕ್ರವಾರ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಸಮೀಪದ ಕೋರಂಗಾಲದಲ್ಲಿ ಗುಡ್ಡ ಕುಸಿತಕ್ಕೆ ಸಿಲುಕಿ ೫ ಜನ ಮೃತಪಟ್ಟಿದ್ದರು. ಅಲ್ಲದೇ ವಿರಾಜಪೇಟೆ ಹೆಗ್ಗಳ ಸಮೀಪ ತೋರ ಗ್ರಾಮದಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಇಬ್ಬರು ಮೃತಪಟ್ಟಿದ್ದಲ್ಲದೇ ಎಂಟಕ್ಕೂ ಹೆಚ್ಚು ಕಣ್ಮರೆಯಾಗಿದ್ದರು. ತೋರದಲ್ಲಿ ಸತತ ನಾಲ್ಕು ದಿನಗಳ ಕಾರ್ಯಚರಣೆ ನಂತರ ಇಂದು ಒಂದು ಮೃತ ದೇಹ ಪತ್ತೆಯಾಗಿದೆ. ಮಣ್ಣು ಕುಸಿತದಲ್ಲಿ ಕಣ್ಮರೆಯಾದವರ ಶೋಧ ಕಾರ್ಯಚರಣೆ ಮುಂದುವರೆದಿದೆ. ಪ್ರವಾಹಕ್ಕೆ ಸಿಲುಕಿ ಕಟ್ಟೆಮಾಡು ಪರಂಬು ಪೈಸಾರಿಯಲ್ಲಿ ಕುಂಞಿಣ್ಣ(೬೮) ಎಂಬುವವರ ಮೃತ ದೇಹ ಸಹಾ ಇಂದು ಪತ್ತಯಾಗಿದೆ. ಪ್ರವಾಹ ಸಂದರ್ಭ ಮನೆಯೊಳಗೆ ಇದ್ದ ಕುಂಞಿಣ್ಣ ಅವರ ಮೃತ ದೇಹ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

0 Post a Comment: