ಟೈಮ್ಸ್ ಆಫ್ ಕೂರ್ಗ್
ವರದಿ : ತೌಸಿಫ್ ಅಹ್ಮದ್ ಅಮ್ಮತ್ತಿ
ಅಮ್ಮತ್ತಿ: ಕೊಡಗಿನ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯುತಿದ್ದು , ಅಮ್ಮತ್ತಿಯಲ್ಲಿ ಕಳೆದ 3ದಿನಗಳಿಂದ ಭಾರೀ ಮಳೆಯಾಗುತ್ತಿದೆ. ನೆನ್ನೆ ರಾತ್ರಿ ಹೊಡೆದ ಭಾರೀ ಮಳೆಯಿಂದಾಗಿ ಅಮ್ಮತ್ತಿ ಕಾರ್ಮಾಡು ಗ್ರಾಮದ ಜನತಾ ಕಾಲೋನಿಯ 3ಮನೆಗಳಿಗೆ ನೀರು ನುಗ್ಗಿದೆ. ಮನೆಯವರು ರಾತ್ರಿಯಲ್ಲಿ ಮನೆಗೆ ನುಗ್ಗಿದ ನೀರನ್ನು ಹೊರ ಚೆಲ್ಲವಲ್ಲಿ ನಿರತರಾದರು. ಕಳೆದ ವರ್ಷವೂ ಇದೇರೀತಿ ಸಂಭವಿಸಿದ್ದು , ಸಂಭಂದ ಪಟ್ಟ ಅಧಿಕಾರಿಗಳಿಗೆ ತಿಳಿಸಿಯೂ ಯಾವುದೇ ಕ್ರಮ ಈವರೆಗೆ ಕೈಗೊಂಡಿಲ್ಲ ಎಂದು ಮನೆಯವರು ದೂರಿದ್ದಾರೆ. ಅಮ್ಮತ್ತಿ ಕಾರ್ಮಾಡು ಗ್ರಾಮದ ಮುಕ್ಕಾಟಿಕೊಪ್ಪದ ತೋಡು ತುಂಬಿ ರಸ್ಥೆ , ತೋಟಗಳು ಜಲಾವೃತವಾಗಿದ್ದು ಗ್ರಾಮಸ್ಥರು ಮನೆಗಳಿಗೆ ನೀರು ನುಗ್ಗುವ ಆತಂಕದಲ್ಲಿದ್ದಾರೆ.





0 Post a Comment: