ಮಂಗಳೂರು: ಬದ್ರಿಯ ಫ್ರೆಂಡ್ಸ್ ಯು.ಎ.ಇ ಮತ್ತು ಅಬುದಾಭಿ ಕಾಸ್ರೊಟ್ಟಾರ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಆಶ್ರಯದಲ್ಲಿ ಆಗಸ್ಟ್ 9(ಶುಕ್ರವಾರ)ರಂದು ಲತೀಫಾ ಆಸ್ಪತ್ರೆ ಹೂದ್ ಮೆಹ್ತಾದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಲತೀಫಾ ಆಸ್ಪತ್ರೆ ಬ್ಲಡ್ ಡೊನೇಷನ್ ಸೆಂಟರ್ ಇವರ ವಿಶೇಷ ಕೋರಿಕೆಯ ಮೇಲೆ ನಡೆಯುವ ಈ ರಕ್ತದಾನ ಶಿಬಿರವು ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 3 ಗಂಟೆಯ ತನಕ ನಡೆಯಲಿದೆ.ಆಸ್ಪತ್ರೆಯಲ್ಲಿ ತಲಸ್ಸೆಮಿಯ(ಅನುವಂಶಿಕವಾಗಿ ಹರಡುವ ರಕ್ತದ ಕಾಯಿಲೆ ತಲಸ್ಸೇಮಿಯಾ/ರಕ್ತ ಕೊರತೆಯ ರೋಗ)ಎಂಬ ರೋಗಕ್ಕೆ ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರು ಅಧಿಕ ಸಂಖ್ಯೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ರಕ್ತದ ಅಗತ್ಯವನ್ನು ಪೂರೈಸಲು ಈ ಶಿಬಿರವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರು,ಉದ್ಯಮಿಗಳು,ಸಂಘ ಸಂಸ್ಥೆಗಳು ಅಧಿಕ ಸಂಖ್ಯೆಯಲ್ಲಿ ಬಾಗವಹಿಸಿ ಈ ಅರ್ಥಪೂರ್ಣವಾದ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಬೇಕಾಗಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ತಂಡ ಮತ್ತು ಸಂಘಟಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ
ಶಂಶುದ್ದೀನ್ 📞+971528981904
ನಝೀರ್ ಬಿಕರ್ಣಕಟ್ಟೆ 📞+971559008516

0 Post a Comment: