ವರದಿ : ಶಿಬಿಲಿ ಕಲ್ಕಂದೂರು
ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ನೆರೆಪೀಡಿತ ಪ್ರದೇಶಗಳಲ್ಲಿ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ( SSF ) ಕಾರ್ಯಕರ್ತರಿಂದ ಮನೆಗಳ ಶುಚೀಕರಣ ಕಾರ್ಯಾಚರಣೆ ನಡೆಯಿತು.ಜಿಲ್ಲೆಯ ವಿವಿಧ ಸೆಕ್ಟರ್ , ಡಿವಿಶನ್ ಗಳಿಂದ ಕಾರ್ಯಕರ್ತರ ದಂಡು ನೆರೆ ಪೀಡಿತ ಪ್ರದೇಶಗಳಲ್ಲಿ ಕಾರ್ಯಚರಣೆಗಿಳಿದರು. ಅಗತ್ಯ ಕಡೆಗಳಲ್ಲಿ ಆಹಾರ, ಅಗತ್ಯ ಸಾಮಾಗ್ರಿಗಳ ಕಿಟ್ ವಿತರಣೆ ನಡೆಯಿತು. ನೆಲ್ಯಹುದಿಕೇರಿ, ಕೊಟ್ಟಮುಡಿ, ಬೇತ್ರಿ ಮುಂತಾದ ಕಡೆಗಳಲ್ಲಿ ನೆರೆಯಿಂದ ಹಾನಿಗೀಡಾದ ಮನೆಗಳನ್ನು ಸ್ವಚ್ಛವಾಗಿಸಿದರು. ನೆಲ್ಯಹುದಿಕೇರಿ ಪ್ರದೇಶದ ಶುಚೀಕರಣ ಕಾರ್ಯಾಚರಣೆಯಲ್ಲಿ ಎಸ್ ಎಸ್ ಎಫ್ ಜಿಲ್ಲಾ ಉಪಾಧ್ಯಕ್ಷರಾದ ಶಾಫಿ ಸಅದಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಸ್ತಫಾ , ಸದಸ್ಯರಾದ ರಹೀಮ್ ಹೊಸತೋಟ ಝುಬೈರ್ ಸಅದಿ, ಜುನೈದ್ ಅಮ್ಮತ್ತಿ ಹಾಗೂ ಇನ್ನಿತರ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕರ್ತರನ್ನು ಕಂಡ ಸ್ಥಳೀಯರು ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.








0 Post a Comment: