ಟೈಮ್ಸ್ ಆಫ್ ಕೂರ್ಗ್
ನವದೆಹಲಿ : 2017ರಲ್ಲಿ ನಡೆದ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಹತ್ಯೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.
ಅತ್ಯಾಚಾರ ಪ್ರಕರಣದ ಸಂತ್ರಸ್ತೆಗೆ ನಾಳೆಯೊಳಗೆ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಜತೆಗೆ ಪ್ರಕರಣವನ್ನು ದೆಹಲಿ ಕೋರ್ಟ್ಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವ ಕೋರ್ಟ್ ಮುಂದಿನ 45 ದಿನಗಳಲ್ಲಿ ಪ್ರಕರಣದ ವಿಚಾರಣೆ ನಡೆಸುವಂತೆ ಸೂಚಿಸಿದೆ. ಈ ಮಧ್ಯೆ ಮುಂದಿನ 7 ದಿನದೊಳಗೆ ಸಿಬಿಐ ವಿಚಾರಣೆ ಅಂತ್ಯಗೊಳಿಸಿ ವರದಿ ಸಲ್ಲಿಸುವಂತೆಯೂ ಹೇಳಿದ್ದು, ಸಂತ್ರಸ್ತೆ ಕುಟುಂಬ ಹಾಗೂ ವಕೀಲರಿಗೆ ಸಿಆರ್ಪಿಎಫ್ ಭದ್ರತೆ ನೀಡುವಂತೆ ನಿರ್ದೇಶನ ಕೊಟ್ಟಿದೆ.
ಪ್ರಕರಣದ ಆರೋಪಿ ಬಿಜೆಪಿ ಶಾಸಕ ಕುಲ್ ದೀಪ್ ಸಿಂಗ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
ಘಟನೆಗೆ ಸಂಬಂಧಿತ ಐದು ಪ್ರಕರಣಗಳನ್ನು ಸುಪ್ರೀಂಕೋರ್ಟ್ ದೆಹಲಿ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಿದೆ.

0 Post a Comment: