ಮಡಿಕೇರಿ -ನಗರದ ಕೋಟೆ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಬೆಂಗಳೂರು ದಕ್ಷಿಣ ವಿಭಾಗದ ಭಾರತೀಯ ಪುರಾತತ್ವ ಸರ್ವೇಕ್ಷಣಾಧಿಕಾರಿ ಮೂರ್ತೇಶ್ವರಿ, ಮಾಹಿತಿ ಹಕ್ಕು ಆಯೋಗದ ಮಾಜಿ ಆಯುಕ್ತರಾದ ವಿರೂಪಾಕ್ಷಯ್ಯ, ಸ್ವಾಮೀಜಿಗಳು ಮತ್ತಿತರರು ಗುರುವಾರ ಭೇಟಿ ನೀಡಿ ವೀಕ್ಷಣೆ ಮಾಡಿದರು. ಕಲ್ಲುಮಠದ ಮಹಂತ ಸ್ವಾಮೀಜಿ, ಅಮ್ಮತ್ತಿಯ ಕನ್ನಡ ಮಠದ ಚೆನ್ನಬಸವ ದೇಶೀಕೇಂದ್ರ ಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಎಸ್.ಮಹೇಶ್, ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷರಾದ ಶಿವಪ್ಪ, ಗ್ರೀನ್ ಸಿಟಿ ಫೋರಂನ ಅಧ್ಯಕ್ಷರಾದ ಚೆಯ್ಯಂಡ ಸತ್ಯ, ಜಯ ಚಿನ್ನಪ್ಪ, ಅಂಬೆಕಲ್ ನವೀನ್, ರಾಜೇಶ್, ಕೃಷ್ಣಮೂರ್ತಿ, ಸೋಮವಾರಪೇಟೆ ತಾಲ್ಲೂಕು
ವೀರಶೈವ ಮಹಾಸಭಾದ ಅಧ್ಯಕ್ಷರಾದ ಹಾಲಪ್ಪ, ಪ್ರೇಮನಾಥ, ಶಂಭ ಶಿವಮೂರ್ತಿ, ಜಿ.ಎಂ.ಕಾಂತರಾಜು, ಮಹದೇವಪ್ಪ, ಭಾರತೀಯ ಪುರಾತತ್ವ ಇಲಾಖೆಯ ಅಧೀಕ್ಷಕರಾದ ರಮೇಶ್ ಮುಳ್ಳಿಮನಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ ಇತರರು ವೀಕ್ಷಣೆ ಮಾಡಿದರು. ಮಾಹಿತಿ ಹಕ್ಕು ಆಯೋಗದ ಮಾಜಿ ಆಯುಕ್ತರಾದ ಕೆ.ಎಸ್.ವಿರೂಪಾಕ್ಷಯ್ಯ ಅವರು ಮಾತನಾಡಿ ಕೋಟೆಯು ಪಾರಂಪರಿಕ ಕಟ್ಟಡವಾಗಿದ್ದು, ಪ್ರಸ್ತುತ ಕೋಟೆಯ ಸ್ಥಿತಿಯು ದುಸ್ಥಿತಿಯಲ್ಲಿದ್ದು, ಇದನ್ನು ಸಂರಕ್ಷಿಸುವ ಹೊಣೆಗಾರಿಕೆ ಭಾರತೀಯ ಪುರಾತತ್ವ ಇಲಾಖೆಯ ಜವಾಬ್ದಾರಿಯಾಗಿದೆ ಅವರು ತಿಳಿಸಿದರು. ಮೂರ್ತೇಶ್ವರಿ ಅವರು ಮಾತನಾಡಿ ಕೋಟೆಯನ್ನು ರಕ್ಷಿಸುವುದು ನಮ್ಮ ಇಲಾಖೆಯ ಆದ್ಯ
ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಸಂಪೂರ್ಣ ದುರಸ್ತಿ ಕಾರ್ಯ ನಡೆಸಲು ಕೋಟೆಯನ್ನು ಭಾರತೀಯ ಪುರಾತತ್ವ ಇಲಾಖೆಗೆ ಹಸ್ತಾಂತರಿಸಬೇಕು. ಹಸ್ತಾಂತರಗೊಂಡ ನಂತರ ಕಟ್ಟಡದ ಸಂಪೂರ್ಣ ಉಸ್ತುವಾರಿ ಹಾಗೂ ನಿರ್ವಹಣೆಯನ್ನು ಭಾರತೀಯ ಪುರಾತತ್ವ ಇಲಾಖೆ ವಹಿಸಿಕೊಳ್ಳಲಾಗುವುದು. ಕೋಟೆಯನ್ನು ಹಸ್ತಾಂತರ ಗೊಳಿಸದೆ ಯಾವುದೇ ಪೂರ್ಣ ಪ್ರಮಾಣದ ಕಾಮಗಾರಿಯನ್ನು ನಿರ್ವಹಿಸಲು ಬರುವುದಿಲ್ಲ. ಆದರೆ ಹಸ್ತಾಂತರ ಪ್ರಕ್ರಿಯೆ ಮುಗಿಯುವ ತನಕ ತಾತ್ಕಾಲಿಕ ದುರಸ್ತಿಯನ್ನು ಅರ್ಜಿದಾರರ ಮನವಿಯಂತೆ ಮಾಡಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.



0 Post a Comment: