ಆ.೦೫ ರಂದು ಅಂತರ ಕಾಲೇಜು ಸಾಂಪ್ರದಾಯಿಕ ಕ್ರೀಡಾಕೂಟ

 
ಮಡಿಕೇರಿ:ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು ವಿಶ್ವವಿದ್ಯಾನಿಲಯ, ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೈಹಿಕ ಶಿಕ್ಷಣ ವಿಭಾಗದಿಂದ ಆಯೋಜಿಸಿರುವ ಕೊಡಗು ವಲಯ ಮಟ್ಟದ ಅಂತರ ಕಾಲೇಜು ಸಾಂಪ್ರದಾಯಿಕ ಕ್ರೀಡಾಕೂಟವು ಕಾಕೋಟುಪರಂಬು ಮುಲ್ಲೇರ ಮಧುರವರ ಗದ್ದೆಯಲ್ಲಿ ಆಗಸ್ಟ್, ೦೫ ರಂದು ಬೆಳಗ್ಗೆ ೧೦.೩೦ ಗಂಟೆಗೆ ನಡೆಯಲಿದೆ. ಶಾಸಕರಾದ ಕೆ.ಜಿ.ಬೋಪಯ್ಯ, ಕಾಕೋಟುಪರಂಬು ಕಾಫಿ ಬೆಳೆಗಾರರಾದ ಮುಲ್ಲೇರ ಮಧು ಮಂಜುನಾಥ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ.ಕಿಶೋರ್ ಕುಮಾರ್ ಸಿ.ಕೆ., ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಕೆ.ಬೋಪಯ್ಯ, ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ.ರಾಖಿ ಪೂವಣ್ಣ ಇತರರು ಪಾಲ್ಗೊಳ್ಳಲಿದ್ದಾರೆ.
Previous Post
Next Post

0 Post a Comment: