ಆರೋಗ್ಯ ಮತ್ತು ನೈರ್ಮಲ್ಯ ಕುರಿತ ವಸ್ತು ಪ್ರದರ್ಶನ ಉದ್ಘಾಟನೆ 


ಮಡಿಕೇರಿ :-ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆರೋಗ್ಯ, ನೈರ್ಮಲ್ಯ ಮತ್ತಿತರ ಕಾರ್ಯಕ್ರಮಗಳ ಕುರಿತು ಎರಡು ದಿನಗಳ ಕಾಲ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಏರ್ಪಡಿಸಿರುವ ವಸ್ತು ಪ್ರದರ್ಶನಕ್ಕೆ ಜಿ.ಪಂ.ಸಿಇಒ ಕೆ.ಲಕ್ಷ್ಮಿ ಪ್ರಿಯಾ ಅವರು ಗುರುವಾರ ಚಾಲನೆ ನೀಡಿದರು. ಬಳಿಕ ವಸ್ತು ಪ್ರದರ್ಶನ ವೀಕ್ಷಣೆ ಮಾಡಿ ಮಾತನಾಡಿದ ಜಿ.ಪಂ.ಸಿಇಒ ಕೆ.ಲಕ್ಷ್ಮಿ ಪ್ರಿಯಾ ಅವರು ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಎರಡು ದಿನಗಳ ಕಾಲ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, ಸಾರ್ವಜನಿಕರು ಮಾಹಿತಿ ಪಡೆದುಕೊಳ್ಳಬೇಕಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರೂ ಹೆಚ್ಚಿನ ಜಾಗೃತಿ ವಹಿಸುವುದು ಅತ್ಯಗತ್ಯ ಎಂದು ಅವರು ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಆರೋಗ್ಯ

ಕಾರ್ಯಕ್ರಮಗಳ ಕುರಿತು ಹಲವು ಮಾಹಿತಿ ನೀಡಿದರು. ವಾರ್ತಾಧಿಕಾರಿ ಚಿನ್ನಸ್ವಾಮಿ ಇತರರು ಇದ್ದರು. ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ ಆಶಯದಂತೆ ರಕ್ತ ಹೀನತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು, ಸುಸ್ತು, ಎದೆ ನೋವು, ಬಿಳುಚಿದ ಕಣ್ಣು/ ಚರ್ಮ, ತಲೆ ಸುತ್ತು, ಜೋರಾದ ಹೃದಯ ಬಡಿತ ಮುಂತಾದವು ರಕ್ತ ಹೀನತೆಯ ಲಕ್ಷಣವಾಗಿದೆ. ಇದನ್ನು ತಡೆಯಲು ಕಬ್ಬಿಣ ಅಂಶ ಹೇರಳವಾಗಿರುವ ಸೊಪ್ಪು, ಕಾಳು, ಬೆಲ್ಲವನ್ನು ಹೆಚ್ಚಾಗಿ ಆಹಾರದಲ್ಲಿ ಸೇವಿಸುವುದು. ಅಂಗನವಾಡಿ, ಶಾಲೆಗಳಲ್ಲಿ ಉಚಿತವಾಗಿ ಕಬ್ಬಿಣ ಅಂಶ ಮಾತ್ರೆಗಳ ಪೂರೈಕೆ ಮಾಡುವುದು, ಗರ್ಭಿಣೀಯರಲ್ಲಿ ರಕ್ತ ಹೀನತೆ ತಡೆಯಲು ಪೋಲಿಕ್ ಆಮ್ಲ ಮಾತ್ರೆ ಪಡೆಯುವುದು. ಮಾನಸಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು, ಕ್ಷಯರೋಗ ನಿಯಂತ್ರಣ ಮಾಡುವುದು. ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು, ನೀರಿನ ತೊಟ್ಟಿಗಳು, ಡ್ರಮ್, ಬ್ಯಾರಲ್ ಮತ್ತು ಟ್ಯಾಂಕ್‌ಗಳನ್ನು ಕನಿಷ್ಠ ವಾರಕ್ಕೆ ಒಂದು ಬಾರಿ ಸ್ವಚ್ಛಗೊಳಿಸಿ ಭದ್ರವಾಗಿ ಮುಚ್ಚಿಡುವುದು, ಮಳೆ ನೀರು ಸಂಗ್ರಹವಾಗುವ ಟೈರುಗಳು, ತೆಂಗಿನ ಚಿಪ್ಪುಗಳನ್ನು ವಿಲೇವಾರಿ ಮಾಡುವುದು, ಏರ್ ಕೂಲರ್, ಹೂವಿನ ಕುಂಡ, ಪೈರ್ ಬಕೇಟ್ ಮತ್ತಿತರ ಪ್ರತೀ ವಾರ ಖಾಲಿ ಮಾಡಿ ಒಣಗಿಸಿ

ಉಪಯೋಗಿಸುವುದು. ಹಗಲಲ್ಲಿ ವಿಶ್ರಾಂತಿ ಪಡೆಯುವವರು ಸೊಳ್ಳೆ ಪರದೆಯನ್ನು ತಪ್ಪದೇ ಬಳಸಬೇಕು. ಡೆಂಗ್ಯೂ ಹರಡದಂತೆ ಎಚ್ಚರ ವಹಿಸಲು ಮುಂದಾಗಬೇಕು. ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುವುದು, ಗರ್ಭಿಣಿಯರು ಹೆಸರು ನೋಂದಾಯಿಸಿಕೊಳ್ಳಬೇಕು. ಗರ್ಭಧಾರಣೆ ಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಗರ್ಭಿಣಿ ಮತ್ತು ನವಜಾತ ಶಿಶುಗಳ ಸಂರಕ್ಷಣೆಗಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆಗಳು ಉಚಿತವಾಗಿದ್ದು, ಅವುಗಳನ್ನು ಪಡೆದುಕೊಳ್ಳುವುದು ಮನೆಯಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ಮೇಲ್ದರ್ಜೆ ಆಸ್ಪತ್ರೆಗೆ ಮತ್ತು ಮನೆಗೆ ಹಿಂದಿರುಗಲು ನಗುಮಗು ಆಂಬ್ಯುಲೆನ್ಸ್ ಸೇವೆ ಪಡೆಯುವುದು, ತಾಯಂದಿರ ಸಂಪೂರ್ಣ ವಾತ್ಸಲ್ಯ ಕಾರ್ಯಕ್ರಮ. ಮಗುವಿಗೆ ೬ ತಿಂಗಳು ತುಂಬುವವರೆಗೆ ಎದೆ ಹಾಲನ್ನು ಕುಡಿಸುವುದು, ಶಿಶು ಮರಣ ಹಾಗೂ ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡುವುದು, ಕುಟುಂಬಸ್ಥರು ಮತ್ತು ಆರೋಗ್ಯ ಕಾರ್ಯಕರ್ತರು ತಾಯಿಯು ಮಗುವಿಗೆ ಎದೆ ಹಾಲು ಕುಡಿಸಲು ಪ್ರೋತ್ಸಾಹಿಸುವುದು, ಗೃಹ ಆಧಾರಿತ ನವಜಾತ ಶಿಶು ಆರೈಕೆ, ನವಜಾತ ಶಿಶು ಮತ್ತು ಹೆರಿಗೆ ನಂತರ ತಾಯಂದಿರಿಗೆ ಆರೈಕೆಯನ್ನು ಮನೆಯಲ್ಲೆÃ ನೀಡುವುದು. ನವಜಾತ ಶಿಶುಗಳ ಆರೋಗ್ಯದಲ್ಲಿ ಕಂಡುಬರುವ ವ್ಯತ್ಯಾಸವನ್ನು ಗುರುತಿಸಿ ಮೇಲ್ಮಟ್ಟದ ಆರೋಗ್ಯ ಸಂಸ್ಥೆಗಳಿಗೆ ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಕೊಡಿಸುವುದು, ಇದರಿಂದ ತಾಯಂದಿರ ಮರಣ ಮತ್ತು ನವಜಾತ ಶಿಶುಗಳ ಮರಣವನ್ನು ತಡೆಯಬಹುದಾಗಿದೆ. ನವಜಾತ ಶಿಶುಗಳ ಆರೈಕೆ ನವಜಾತ ಶಿಶು ತೀವ್ರ ನಿಗಾ ಘಟಕಗಳು, ರೇಡಿಯಂಟ್ ವರ‍್ಮರ್‌ಗಳ ಸೇವೆ, ಮಕ್ಕಳ ಅಪೌಷ್ಠಿಕತೆಯನ್ನು ತಡೆಯಲು ಪೌಷ್ಠಿಕ ಆಹಾರ ಪುನಃಶ್ಚೆÃತನ ಕೇಂದ್ರಗಳನ್ನು ತೆರೆಯಲಾಗಿದ್ದು ಇವುಗಳನ್ನು ಬಳಸಿಕೊಳ್ಳುವುದು, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಗಳು ಸಂಪೂರ್ಣ ಲಸಿಕೆ ಪರಿಪೂರ್ಣ ಆರೋಗ್ಯದಡಿ ಐದು ವರ್ಷದಲ್ಲಿ ಏಳು ಬಾರಿ ಒಂದು ಬಾರಿಯೂ ತಪ್ಪಿಸದೆ ಲಸಿಕೆ ಹಾಕಿಸುವುದು. ಪೌಷ್ಠಿಕ ಆಹಾರ ನೀಡುವ ನಿಟ್ಟಿನಲ್ಲಿ ಮಕ್ಕಳಲ್ಲಿ ತೀವ್ರ ಅಪೌಷ್ಠಿಕ ತಡೆಯಲು ಪೌಷ್ಠಿಕ ಆಹಾರ ಪುನಃಶ್ಚೆÃತನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅವುಗಳ ಬಳಕೆ ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ತಾಯಿ, ಪೋಷಕರು ೧೪ ದಿನಗಳ ವರಗೆ ಕೇಂದ್ರಗಳಲ್ಲಿ ತಂಗಲು ತಾಯಿ, ಪೋಷಕರಿಗೆ ದಿನಗೂಲಿ, ತಾಯಿ ಮಗುವಿನ ಆಹಾರ, ಮನ ಸಂವೇದನಾ ಆರೈಕೆ ಹಾಗೂ ಔಷಧಿಗಾಗಿ ಸಹಾಯಧನ, ಹೀಗೆ ಸರ್ಕಾರದ ಹಲವು ಆರೋಗ್ಯ ಸೌಲಭ್ಯಗಳನ್ನು ಅರ್ಹರು ಪಡೆದುಕೊಳ್ಳಬಹುದಾಗಿದೆ.
Previous Post
Next Post

0 Post a Comment: