ಪ್ರಳಯ ( ಕವನ ) ; ಸಿದ್ದೀಕ್ ಶನಿವಾರಸಂತೆ


ಟೈಮ್ಸ್ ಆಫ್ ಕೂರ್ಗ್ 
ಬರುತ್ತಿದ್ದಾನೆ ಮನುಷ್ಯ ನಿನ್ನೆಡೆಗೆ
ಯಾರಿಗೂ ಕಾಣದ ಲೋಕಕ್ಕೆ ಕೊಂಡೋಗಲು,
ನಿನ್ನನ್ನು ದೂರದ ಊರಿಗೆ
ಕೊಂಡೊಯ್ಯುವ ಅತಿಥಿಯೊಬ್ಬನು..!

ನೀ ತೋರದ ಮಾನವೀಯತೆಯನ್ನು
ಆ ಜಾತಿ ಈ ಜಾತಿ ಎಂದು ಕಚ್ಚಾಡುತ್ತಿದ್ದ,
ಮಾನವೀಯತೆ ಇಲ್ಲದ ನಿನ್ನ ಮನುಷ್ಯತ್ವವನ್ನು
ಅಲೆ ಅಲೆಯಾಗಿ ಕೊಚ್ಚಿಕೊಂಡು ಹೋಗಲು..!

ಕೊಚ್ಚಿಹೋಗಲಿದೆ ನೀ ಕಟ್ಟಿದ ಅರಮನೆಯು
ಬೀದಿಪಾಲಾಗಲಿದ್ದಾರೆ ನಿನ್ನಯವರು,
ಅಲೆ ಅಲೆಯಾಗಿ ಕೊಚ್ಚಿ ಹೋಗಲಿದೆ
ನೀ ತೋರುತ್ತಿದ್ದ ಅಹಂಕಾರವು..!

ನೀ ಚಲಿಸುತ್ತಿದ್ದ ಬೆಲೆಬಾಳುವ ವಾಹನಗಳು
ಕೊಚ್ಚಿ ಹೋಗಲಿದೆ ನಿನ್ನ ಕಣ್ಣೆದುರಿಗೆ,
ನೀ ನಡೆಸುತ್ತಿದ್ದ ಶೋಕಿಯ ಜೀವನ
ಅಲೆ ಅಲೆಯಾಗಿ ಕೊಚ್ಚಿ ಹೋಗಲಿದೆ..!

ಅಗೋ ಅಪ್ಪಳಿಸಿ ಬರುತ್ತಿದೆ
ಎಲ್ಲವನ್ನು ಅಲೆ ಅಲೆಯಾಗಿ,
ನೀರಿನೊಂದಿಗೆ ಕೊಚ್ಚಿಕೊಂಡು ಹೋಗುವ
ಸುನಾಮಿಯೊಂದು..!
🌊____________________________🌊

✍️.ಸಿದ್ದೀಕ್ ಶನಿವಾರಸಂತೆ,ಕೊಡಗು
Previous Post
Next Post

0 Post a Comment: