ಸಿರಾಜ್ ದಿನಪತ್ರಿಕೆಯ ಕೆಎಂ ಬಶೀರ್ ಮರಣ, ತನಿಖೆ ಚುರುಕುಗೊಳಿಸಲು ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು : ಕಾಂತಪುರಂ ಉಸ್ತಾದ್


ಟೈಮ್ಸ್ ಆಫ್ ಕೂರ್ಗ್ 
ತಿರುವನಂತಪುರ : ಸಿರಾಜ್ ದಿನ ಪತ್ರಿಕೆಯ ತಿರುವನಂತಪುರಂ ಆವೃತ್ತಿಯ ಮುಖ್ಯಸ್ಥರಾದ ಕೆ.ಎಂ ಬಶೀರ್ ನಿನ್ನೆ ನಡೆದ ಅಪಘಾತದಲ್ಲಿ ಮರಣಹೊಂದಿದ್ದಾರೆ. ಶಾಂತ ಸ್ವಭಾವದ ಪ್ರತಿಭಾವಂತ ಪತ್ರಕರ್ತನ ಮರಣಕ್ಕೆ ಸುನ್ನೀ ಉಲಮಾ ಸಾರಥಿಗಳು ಸಮೇತ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಕುಡಿತದ ಅಪಘಾತಕ್ಕೆ ಕಾರಣವಾದ ವಾಹನವನ್ನು ಶ್ರೀರಾಮ್ ವೆಂಕಿಟ್ರಾಮನ್ ಓಡಿಸಿದರು ಎಂದು ಸಾಕ್ಷಿಗಳು ಹೇಳಿರುವಂತೆ, ಪೊಲೀಸರು ಆರೋಪಿಗಳನ್ನು ಕಾನೂನಿನ ಮುಂದೆ ತರಲು ಹಿಂಜರಿಯಬಾರದು ಎಂದು ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೆಎಂ ಬಶೀರರ ಪಾರ್ಥಿವ ಶರೀರ ಸಂದರ್ಶಿಸಿ ತೀವ್ರ ದುಃಖ ವ್ಯಕ್ತಪಡಿಸಿ, ಸೂಕ್ತ ತನಿಖೆ ನಡೆಸುದಾಗಿ ಹೇಳಿದರು. 
Previous Post
Next Post

0 Post a Comment: