ಕೊಡಗಿನ ಇಬ್ಬರು ಯುವಕರಿಗೆ ಪ್ಲಾಟಿನಂ ಸ್ಟಾರ್ ಅವಾರ್ಡ್ 


ಟೈಮ್ಸ್ ಆಫ್ ಕೂರ್ಗ್ 
ಮಡಿಕೇರಿ: ಶಿವಮೊಗ್ಗ ಜಿಲ್ಲೆಯ ಐಕೋನಿವೋ ಟೈರಂಡ್ಸ್ ಮಾರ್ಕೆಟಿಂಗ್ ಪ್ರೈವೆಟ್ ಲಿಟಿಮಿಟೆಡ್ ಕಂಪನಿ ವತಿಯಿಂದ ಅತ್ಯುತ್ತಮ ಸಾಧನೆಗೆ ನೀಡುವ "ಪ್ಲಾಟಿನಂ ಸ್ಟಾರ್" ಅವಾರ್ಡ್ ಗೆ ಕೊಡಗಿನ ಸುಂಟಿಕೊಪ್ಪ ನಿವಾಸಿಯಾದ ಕೆ.ಎ ರಾಜಿಕ್ ಹಾಗೂ ಕುಟ್ಟ ನಿವಾಸಿಯಾದ ಎಂ.ಇ ಸಲ್ಮಾನ್ ಅವರು ಭಾಜನರಾಗಿದ್ದಾರೆ. ಕೊಡಗು ಜಿಲ್ಲೆಯಿಂದ ಮೊದಲ "ಪ್ಲಾಟಿನಂ ಅವಾರ್ಡ್ ಪಡೆದ ಸುಂಟಿಕೊಪ್ಪ ನಿವಾಸಿಯಾದ ಕೆ.ಎ ರಾಜಿಕ್

ಅವರು ಕೊಡಗು ಜಿಲ್ಲಾ ಎಸ್.ಎಸ್.ಎಫ್ ಕೌನ್ಸಿಲರ್ ಹಾಗೂ ರಾಜ್ಯ ಎನ್.ಎಸ್.ಯು.ಐ ಇದರ ರಾಜ್ಯ ಘಟಕದ ಕೌನ್ಸಿಲರ್ ಆಗಿದ್ದಾರೆ‌‌. ಕುಟ್ಟ ನಿವಾಸಿಯಾದ ಸಲ್ಮಾನ್ ಎಂ.ಇ ಅವರು ಜಿಲ್ಲೆಯಿಂದ ಎರಡನೇ ಪ್ಲಾಟಿನಂ ಅವಾರ್ಡ್ ಪಡೆದ ವ್ಯಕ್ತಿಯಾಗಿದ್ದಾರೆ.
Previous Post
Next Post

0 Post a Comment: