ಟೈಮ್ಸ್ ಆಫ್ ಕೂರ್ಗ್
ಚೆಟ್ಟಳ್ಳಿ: ಸಮೀಪದ ಪೊನ್ಮತ್ ಮೊಟ್ಟೆಯ ಮೌನತುಲ್ ಇಸ್ಲಾಂ ಮದರಸದಲ್ಲಿ ಸಾಹಿತ್ಯ ಸಮಾಜವನ್ನು ರೂಪಿಸಿ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ಮದರಸ ಮುಖ್ಯೋಪಾಧ್ಯಾಯರಾದ ಸಹದ್ ಫೈಝಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಮದರಸ ಅಧ್ಯಾಪಕ ಮುಹಯದ್ದೀನ್ ಸಖಾಫಿ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಸಾಮಾಜಿಕ ಚಟುವಟಿಕೆಗಳಲ್ಲಿ ಮುಂದೆ ಬರಬೇಕು ಎಂದರು. ಜಲಾಲ್ ಉಸ್ತಾದ್ ಮಾತನಾಡಿ ಸಾಹಿತ್ಯ ಸಮಾಜದಿಂದ, ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಕಲಾ , ಸಾಂಸ್ಕೃತಿಕ ರಂಗದಲ್ಲಿ ಮುಂದೆ ಬರಬೇಕು ಎಂದು ಹೇಳಿದರು.



0 Post a Comment: