ಅಯೋಧ್ಯೆ ಭೂವಿವಾದ : ಇಂದು ಮಧ್ಯಸ್ಥಿಕೆ ತಂಡದಿಂದ ಸುಪ್ರೀಂಕೋರ್ಟ್ ಗೆ ವರದಿ ಸಲ್ಲಿಕೆ


ಟೈಮ್ಸ್ ಆಫ್ ಕೂರ್ಗ್ 
ನವದೆಹಲಿ: ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ನೇಮಕವಾಗಿರುವ ಮಧ್ಯಸ್ಥಿಕೆ ತಂಡದ ಒಟ್ಟಾರೆ ಸ್ಥಿತಿಗತಿಯ ಪರಿಶೀಲನೆಯನ್ನು ಸುಪ್ರೀಂ ಕೋರ್ಟ್​ ಇಂದು ನಡೆಸಲಿದೆ.ಪರಿಶೀಲನೆಯಲ್ಲಿ ಮುಖ್ಯವಾಗಿ ಸುಪ್ರೀಂ ಕೋರ್ಟ್​ ಪ್ರಕರಣದ ವಿಚಾರಣೆಯನ್ನು ಎಲ್ಲಿ ನಡೆಸಬೇಜಕು ಮತ್ತು ಮಧ್ಯಸ್ಥಿಕೆಯಲ್ಲಿ ಇನ್ನಷ್ಟು ಗುಂಪುಗಳೊಂದಿಗೆ ಮಾತುಕತೆ ಅವಕಾಶ ನೀಡಬೇಕೇ ಎನ್ನುವ ಕುರಿತು ತೀರ್ಮಾನಕ್ಕೆ ಬರಲಿದೆ.
ಜುಲೈ 18ರಂದು ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಸವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಮೂರ್ತಿ ರಂಜನ್​ ಗೊಗೊಯ್​ ನೇತೃತ್ವದ ಪಂಚ ಸದಸ್ಯ ಪೀಠ, ಆಗಸ್ಟ್​ ಒಂದರಿಂದ ಮಧ್ಯಸ್ಥಿಕೆಯಲ್ಲಿ ಕಂಡುಬಂದ ಅಂಶಗಳ ಬಗ್ಗೆ ಪೀಠಕ್ಕೆ ತಿಳಿಸುವಂತೆ ಮಧ್ಯಸ್ಥಿಕೆದಾರರಿಗೆ ಸೂಚಿಸಿತ್ತು. ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಮೂರ್ತಿ ಎಫ್​.ಎಂ.ಖಲೀಫುಲ್ಲಾ, ಧಾರ್ಮಿಕ ಮುಖಂಡ ಶ್ರೀ ಶ್ರೋ ರವಿಶಂಕರ್​ ಹಾಗೂ ಕಾನೂನು ತಜ್ಞ ಶ್ರೀರಾಮ್ ಪಂಚುರನ್ನು ಸುಪ್ರೀಂ ಕೋರ್ಟ್​ ನೇಮಕ ಮಾಡಿ ಮಧ್ಯಸ್ಥಿಕೆ ಮೂಲಕ ವಿವಾದಕ್ಕೆ ಕೊನೆ ಹಾಡುವ ಪ್ರಯತ್ನ ಮಾಡಿತ್ತು.

.
Previous Post
Next Post

0 Post a Comment: