ಬರೆ ಕುಸಿತ : ತಾಯಿ ಮಗಳ ದುರ್ಮರಣ


ಮಡಿಕೇರಿ: ಮನೆಯ ಮೇಲೆ ಬರೆ ಕುಸಿದು ತಾಯಿ ಮಗಳು ಭೂಸಮಾಧಿಯಾಗಿರುವ ಧಾರುಣ ಘಟನೆ ವರದಿಯಾಗಿದೆ. ವೀರಾಜಪೇಟೆ ತಾಲೂಕಿನ ತೋರ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು ವೊಕ್ಕಲಿಗರ ಪರಮೇಶ್ವರ ಎಂಬವವರ ಪತ್ನಿ ಮಮತಾ (೪೫) ಹಾಗೂ ಮಗಳು ಲಿಖಿತ (೧೪) ಮೃತ ದುರ್ದೈವಿಗಳು. ಇಂದು ಬೆಳಿಗ್ಗೆ ಇವರ ಮನೆಯ ಮೇಲೆ ಬರೆ ಕುಸಿದು ಬಿದ್ದಿದೆ. ಮಣ್ಣಿನಡಿಯಲ್ಲಿ ಸಿಲುಕಿದ್ದ ಇವರ ರಕ್ಷಣೆಗಾಗಿ ಕಾರ್ಯವನ್ನು ಕೈಗೊಳ್ಳಲಾಗಿ ಸಂಜೆ ವೇಳೆಗೆ ಮೃತ ದೇಹವನ್ನು ಹೊರ ತೆಗೆಯಲಾಯಿತು.

Previous Post
Next Post

0 Post a Comment: