ಕವನ : ಜುನೈದ್ ಕೆ ಎ ಕೊಡಗು
ಸರ್ವರಿಗಿಹುದು ಭಾರತವೆಂಬ ಶಾಂತಿ ಸೌಹಾರ್ದತೆಯ ತಾಯ್ನಾಡು,
ಕವಿ ಪುಂಗವರ ನೆಲೆಬೀಡು,
ಐಕ್ಯ ಮಂತ್ರ ಸಾರುವ ಈ ಬೀಡು.
ನಾ ಕಲಿತ ಕುರ್ ಆನ್ ಆಗಲೀ,
ನಾ ಓದಿದ ಗೀತೆಯಾಗಲಿ,
ನಾ ಕೇಳಿದ ಬೈಬಲ್ ಆಗಲೀ,
ಸಾರಿದೆ ಕೋಮು ಸೌಹಾರ್ದ?
ನನ್ನ ಧರ್ಮ ಯಾವುದಾಗಲಿ,
ಇವನ್ಯಾವ ಜಾತಿಯಾಗಲಿ,
ಯಾರೇ ಯಾವ ಪಂಗಡವಾಗಲಿ,
ಸಾರೋಣ ಐಕ್ಯದ ಸಂದೇಶ ಕಟ್ಟೋಣ ಭವ್ಯ ಭಾರತ ದೇಶ.
ನೆರೆ ಹಾವಳಿ ಪಕ್ಕ ಬಂದಾಗ,
ಕೈ ಚಾಚಿ ಕರುಣಿಸಿದಾಗ,
ಕಾಣದಾದ ಸ್ನೇಹ ಒಂದಾದಾಗ,
ಸೌಹಾರ್ದ ಮೆರೆದ ಕಾಲವಿದೀಗ.
ಸಮಾಜ ಚಿಂತಕ ನೀನಾಗು,
ಪರಿಸರ ಸ್ನೇಹಿ ನೀನಾಗು,
ಮಾನವ ಕುಲವ ಗೌರವಿಸುವನಾಗು,
ದೇಶ ಪ್ರೇಮಿಯಂತೆ ನೀನಾಗು.
ವಿಧ ವಿಧ ಭಾಷೆಗಳ ದೇಶ ಹಲವು ಪಂಗಡಗಳ ಕೋಶ ಕಣ್ತುಂಬುವ ಸ್ನೇಹ ವಿಶೇಷ ಇದುವೇ ನಮ್ಮ ಭಾರತ ದೇಶ ಗಲಬೆ ಗಲಾಟೆ ದೂರವಾಗಲಿ ಸ್ನೇಹ ಸೌಹಾರ್ದ ಬೆಳೆದು ಬರಲಿ ವಿದ ವಿದ ತೋಟದಂತೆ ಕೂಡಿ ಬಾಳುವ ಮುಂದಿನ ದಿನಗಳಲ್ಲಿ

0 Post a Comment: