ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರತ ರತ್ನ ನೀಡುವಂತೆ ಒತ್ತಾಯಿಸಿದ ಬಿಜೆಪಿ ಸಂಸದ


ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ `ಭಾರತ ರತ್ನ' ಪ್ರಶಸ್ತಿ ನೀಡುವಂತೆ ಬಿಜೆಪಿ ಸಂಸದ ಗುಮಾನ್ ಸಿಂಗ್ ದಾಮೋರ್ ಒತ್ತಾಯಿಸಿದ್ದಾರೆ.
ಲೋಕಸಭಾ ಕಲಾಪದ ಶೂನ್ಯವೇಳೆಯಲ್ಲಿ ಮಾತನಾಡಿದ ಮಧ್ಯಪ್ರದೇಶದ ರತ್ನಂ ಸಂಸದ ಗುಮಾನ್ ಸಿಂಗ್, ನರೇಂದ್ರ ಮೋದಿಯವರು ಯುಗಪುರುಷ, ಅವರಿಗೆ ಭಾರತ ರತ್ನ ನೀಡಿ ಪುರಸ್ಕರಿಸಬೇಕು. ಆರ್ಟಿಕಲ್ 370 ರದ್ದುಗೊಳಿಸುವಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಅವರಿಂದ ಮಾತ್ರ ಸಾಧ್ಯ ಹೀಗಾಗಿ ನಮ್ಮ ದೇಶದ ಅತ್ಯುನ್ನತ ಗೌರವವನ್ನು ನೀಡಬೇಕು ಎಂದು ಹೇಳಿದ್ದಾರೆ.
Previous Post
Next Post

0 Post a Comment: