ವರದಿ : ಜುನೈದ್ ಕೊಡಗು
ಟೈಮ್ಸ್ ಆಫ್ ಕೂರ್ಗ್ ( ದಕ್ಷಿಣ ಕನ್ನಡ)
ಬಂಟ್ವಾಳ: SKSSF ವಿಖಾಯ ಉಪ್ಪಿನಂಗಡಿ ವಲಯ ಇದರ ವತಿಯಿಂದ ಉಪ್ಪಿನಂಗಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ವಠಾರವನ್ನು ಸಂಪೂರ್ಣ ಸ್ವಚ್ಚಗೊಳಿಸಲಾಯಿತು. ಕಳೆದ ದಿನಗಳಲ್ಲಿ ಸುರಿದ ಭಾರಿ ಮಳೆಯಿಂದ ಉಪ್ಪಿನಂಗಡಿ ಸಂಪೂರ್ಣ ತತ್ತರಿಸಿ ಹೋಗಿದ್ದು, ಶಾಲೆಯ ತರಗತಿ ಕೊಠಡಿಗಳ ಒಳಗೂ ನೀರು ಆವರಿಸಿತ್ತು. ಇಂದು ಶಾಲೆಗಳು ಪುನರಾರಂಭಗೊಂಡ ಹಿನ್ನಲೆಯಲ್ಲಿ ತರಗತಿಗಳು ನಡೆಸಲು ಅಸಾದ್ಯವಾಗಿತ್ತು. ಇದನ್ನು ಮನಗಂಡ ವಲಯ ವಿಖಾಯ ಕಾರ್ಯಕರ್ತರು ಶಾಲಾ ವಠಾರ ಹಾಗೂ ತರಗತಿ ಕೊಠಡಿಗಳನ್ನು ಸ್ವಚ್ಚಗೊಳಿಸಿ ಶಾಲಾಭಿವೃದ್ದಿ ಸಮಿತಿ ಹಾಗೂ ಊರ ನಾಗರಿಕರಿಂದ ಪ್ರಶಂಶೆಗೆ ಒಳಗಾಗಿದ್ದಾರೆ.

0 Post a Comment: