ಮಡಿಕೇರಿ: ಕೊಡಗಿನ ಕೊಂಡಂಗೇರಿ ಹಾಗೂ ಪರಿಸರದಲ್ಲಿ ಜಲಪ್ರಳಯದಿಂದ ಅನೇಕರು ನಿರಾಶೆಯಲ್ಲಿರುವ ವಿವರವು ಲಬಿಸಿದಾಗ SSF ಸುಳ್ಯ ಡಿವಿಷನ್ & SჄS ಸುಳ್ಯ ಸೆಂಟರ್ ನ ನೇತಾರರು ಅಲ್ಲಿಗೆ ಹೋಗಿ ಸಾಂತ್ವನ ಕಾರ್ಯ ನಿರ್ವಹಿಸಲು ಕಾರ್ಯಕರ್ತರೊಂದಿಗೆ ತಿಳಿಸಲಾಯಿತು.
ಕೂಡಲೇ ಸ್ಪಂದಿಸಿದ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ನ ನಿಂತಿಕಲ್ಲು ಸೆಕ್ಟರ್ ವ್ಯಾಪ್ತಿಯ ಈಜಿನಲ್ಲಿ ಪಳಗಿದ ಏಳು ಕಾರ್ಯಕರ್ತರು ತಮ್ಮ ಜೀವವನ್ನು ಪಣಕ್ಕಿಟ್ಟು ಕಾರ್ಯಾಚರಣೆಗೆ ಇಳಿದರು.
ನೀರು ಪ್ರತೀ ಸಮಯದಲ್ಲೂ ಮಳೆಯ ಕಠೋರತೆಯಿಂದ ಹೆಚ್ಚುತ್ತಿದ್ದಂತೆ ಹಲವಾರು ಮನೆಗಳು ದ್ವಂಸವಾಗುತ್ತಿರುವುದನ್ನು ಕಣ್ಣಾರೆ ನೋಡಿ ಅತ್ಯಂತ ಪರಿತಾಪಕರವಾದ ಸನ್ನಿವೇಶದಲ್ಲಿ ಜೀವದ ಹಂಗು ತೊರೆದು ಅದೆಷ್ಟೋ ಜೀವಗಳನ್ನು ಸೇಫ್ ಮಾಡಿ ಗಂಜಿ ಕೇಂದ್ರಗಳಿಗೆ ತಲುಪಿಸುವಲ್ಲಿ ಈ ಏಳು ಜನರ ಸೇವೆ ನಿಸ್ವಾರ್ಥ.
ಪಾತಿ/ದೋಣಿಯ ಸಹಾಯದಿಂದ ಜನರನ್ನು ದಡಕ್ಕೆ ತಲುಪಿಸಿದರೂ ಈ ಯುವ ಪಡೆಯು ನೀರಿನಲ್ಲಿಯೇ ಎರಡು ದಿನಗಳ ಕಾಲ ಈಜಾಡಿ ಅಪಘಾತ ವಲಯದಲ್ಲಿ ಪೂರ್ಣವಾಗಿಯೂ ಅಲೆದಾಡಿ ಜನರ ಸಹಾಯಕ್ಕೆ ಸ್ಪಂದಿಸಿದ್ದು ಸಾಹಸಮಯವಾಗಿದೆ.
ಇವರ ನೇತೃತ್ವವನ್ನು ವಹಿಸಿದ ಸುಳ್ಯ ಡಿವಿಷನ್ ಸಮಿತಿಯ ಸದಸ್ಯರಾದ ರಿಯಾಝ್ ನೆಕ್ಕಿಲ ರವರು ಅತ್ಯಂತ ತಾಳ್ಮೆಯುಳ್ಳವರೂ ಈ ಸಂಘದ ನಿಯಂತ್ರಕರೂ ಆಗಿದ್ದಾರೆ. ರಿಯಾಝ್ ರವರ ನೇತೃತ್ವದಲ್ಲಿ ಅಬೂತಾಹಿರ್, ಶಂಸುದ್ದೀನ್, ರಝಾಕ್, ಅಬೂಬಕ್ಕರ್, ಮುಸ್ತಫ ಸಮಾದಿ, ಸ್ವಾದಿಕ್ ರವರು ಪೂರ್ಣ ಸಾಥನ್ನು ನೀಡಿದರು. ಎರಡು ದಿನಗಳ ವರೆಗೆ ನೀರಿನಲ್ಲಿ ಈಜಾಡಿ ಕಾರ್ಯಾಚರಣೆ ನಡೆಸುವುದು ಸುಲಭದ ವಿಷಯವಲ್ಲ. ಇವರ ಈ ಸೇವೆಯು ಅತ್ಯಂತ ಶ್ಲಾಘನೀಯವೂ ಅಭಿನಂದನಾರ್ಹವೂ ಆಗಿದೆ.



0 Post a Comment: