ಭಾಗಮಂಡಲದಲ್ಲಿ ದಾಖಲೆ 40 ಸೆಂ.ಮೀ.ಮಳೆ; ಜಿಲ್ಲೆಯ ಜನಜೀವನ ತತ್ತರ


ಮಡಿಕೇರಿ :ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಿಲ್ಲೆಯ ಜನಜೀವನ ತತ್ತರಿಸುವಂತಾಗಿದೆ. ಕೊಡಗು ಜಿಲ್ಲೆ ಒಂದು ರೀತಿ ದ್ವೀಪದಂತಾಗಿದ್ದು, ಮಡಿಕೇರಿ-ವಿರಾಜಪೇಟೆ, ಮಡಿಕೇರಿ-ಕುಶಾಲನಗರ ಸಾರಿಗೆ ಸಂಚಾರ ವ್ಯತ್ಯಯ ಉಂಟಾಗಿದೆ. ಎಲ್ಲಿ ನೋಡಿದರೂ ನೀರು ನೀರು ಎನ್ನುವಂತಾಗಿದೆ. ಭೂ ಕುಸಿತ, ಮರಗಳು ರಸ್ತೆಗೆ ಬೀಳುವುದು, ವಿದ್ಯುತ್ ಸಂಪರ್ಕ ಕಡಿತ, ನೆಟ್‍ವರ್ಕ್ ಸಂಪರ್ಕ ವ್ಯತ್ಯಯ ಹೀಗೆ ನಾನಾ ರೀತಿಯ ಸಮಸ್ಯೆಗಳಿಗೆ ಸಿಲುಕುವಂತಾಗಿದೆ. ಬಿಡುವು ನೀಡದೆ ಸುರಿಯುತ್ತಿರುವ ಮಳೆಯ ಜೊತೆಗೆ ಚಳಿ, ಗಾಳಿಯಿಂದಾಗಿ ಮನೆಯಿಂದ ಹೊರ ಹೋಗುವುದೇ ಕಷ್ಟ ಸಾಧ್ಯವಾಗಿದೆ. ಪ್ರವಾಹಕ್ಕೆ ಸಿಲುಕಿದವರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ಎನ್‍ಡಿಆರ್‍ಎಫ್, ಪೊಲೀಸ್, ಗೃಹರಕ್ಷಕ ದಳ ತೊಡಗಿಸಿಕೊಂಡಿವೆ. ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 192.98 ಮಿ.ಮೀ. ಕಳೆದ ವರ್ಷ ಇದೇ ದಿನ 129.53 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1664.47 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2786.71 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 254.55 ಮಿ.ಮೀ. ಕಳೆದ ವರ್ಷ ಇದೇ ದಿನ 91.20 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2200.86 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 3908.68 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 234.20 ಮಿ.ಮೀ. ಕಳೆದ ವರ್ಷ ಇದೇ ದಿನ 49.92 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1751.96 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 2223.93 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 90.20 ಮಿ.ಮೀ. ಕಳೆದ ವರ್ಷ ಇದೇ ದಿನ 77.40 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1040.58 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 2227.53 ಮಿ.ಮೀ. ಮಳೆಯಾಗಿತ್ತು. ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 176.80, ನಾಪೋಕ್ಲು 326.20, ಸಂಪಾಜೆ 115.20, ಭಾಗಮಂಡಲ 400, ವಿರಾಜಪೇಟೆ ಕಸಬಾ 270.20, ಹುದಿಕೇರಿ 290, ಶ್ರೀಮಂಗಲ 250, ಪೊನ್ನಂಪೇಟೆ 260, ಅಮ್ಮತ್ತಿ 197, ಬಾಳೆಲೆ 138, ಸೋಮವಾರಪೇಟೆ ಕಸಬಾ 132.40, ಶನಿವಾರಸಂತೆ 92.40, ಶಾಂತಳ್ಳಿ 236, ಕೊಡ್ಲಿಪೇಟೆ 165, ಕುಶಾಲನಗರ 55.40, ಸುಂಟಿಕೊಪ್ಪ 96 ಮಿ.ಮೀ. ಮಳೆಯಾಗಿದೆ. 
Previous Post
Next Post

0 Post a Comment: