ನಮ್ಮ ಕೊಡಗು ತಂಡದಿಂದ ಪರಿಹಾರ ಕಾರ್ಯದ ಬಗ್ಗೆ, ಜಿಲ್ಲಾ ಸಿವಿಲ್ ನ್ಯಾಯಾಧೀಶರ ಬಳಿ ಚರ್ಚೆ.


ಮಡಿಕೇರಿ: ನಮ್ಮ ಕೊಡಗು ತಂಡದಿಂದ ಇಂದು ಸಿದ್ದಾಪುರ ಹೊಳೆ ಹಂಚಿನಲ್ಲಿರುವ ಕರಡಿಕೊಡು ಗ್ರಾಮದ ಸುಮಾರು 89 ಕುಟುಂಬದ 280 ಜನ ವಾಸವಿರುವ ಗಂಜಿ ಕೇಂದ್ರಕ್ಕೆ ಭೇಟಿ ಕೊಟ್ಟು ಅಲ್ಲಿನ ಸ್ಥಿಗತಿಗಳನ್ನು ಅವಲೋಕಿಸಿ, ಬೇಕಾದ ಸಾಮಗ್ರಿಗಳ ಪಟ್ಟಿ ಮಾಡಿಕೊಂಡು ನಂತರದಲ್ಲಿ ಮಡಿಕೇರಿಗೆ ಭೇಟಿ ಕೊಟ್ಟೆವು. ಹಾಗೂ ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ನ್ಯಾಯಾಧೀಶರಾದ ಶ್ರೀಮತಿ #ನೂರುನ್ನೀಸಾ ಹಾಗೂ ಪ್ರಾಕೃತಿಕ ವಿಕೋಪ ಪರಿಹಾರ ಸಮಿತಿಯ ಕೋರ್ ಕಮಿಟಿಯ ಸದಸ್ಯರು ಮತ್ತು ನಮ್ಮ ಕೊಡಗು ತಂಡದ ನಿರ್ದೇಶಕರು, ಸಲಹೆಗಾರರು ಆಗಿರುವ ಮಾನ್ಯ ಎ. ಪವನ್ ಪೆಮ್ಮಯ್ಯ ನವರನ್ನು ಮಡಿಕೇರಿ ಜಿಲ್ಲಾ ನ್ಯಾಯಾಲಯದಲ್ಲಿ ಭೇಟಿ ಮಾಡಿ ನಿರಾಶ್ರೀತರ ಸ್ಥಿತಿಗತಿ ಮತ್ತು ಮುಂದಿನ ಪರಿಹಾರ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ನಮ್ಮ ಕೊಡಗು ತಂಡದ ಸದಸ್ಯರು ಉಪಸ್ಥಿತರಿದ್ದರು.ನಮ್ಮ ಕೊಡಗು ತಂಡದ ಅಧ್ಯಕ್ಷರಾದ ನೌಶಾದ್ ಜನ್ನತ್, ಅಜಿತ್ ಕೋಟ ಕೊರಿಯನ, ಲೋಹಿತ್ ಬಿ. ಬಿ., ರೋಷನ್, ಹಾಗೂ ನಮ್ಮ ಕೊಡಗು ತಂಡದ ಸದಸ್ಯರು ಉಪಸ್ಥಿತರಿದ್ದರು.
Previous Post
Next Post

0 Post a Comment: