ಕೊಡಗು ಮತ್ತೇ..ಪ್ರಕೃತಿ ವಿಕೋಪಕ್ಕೆ ತುತ್ತಾಗಿದೆ.
ಪ್ರಕೃತಿ ಮತ್ತೆ ಕೊಡಗಿನ ಜನತೆಯೊಂದಿಗೆ ಮುನಿಸಿಕೊಂಡಿದ್ದಾಳೆ...
ಕೇವಲ ಆರು ದಿನಗಳಲ್ಲಿ ಕೊಡಗಿನ ಚಿತ್ರಣವೇ ಬದಲಾಗಿದೆ..ಹಾಜರಿದ್ದರು.ಲಿ ಆಶ್ಲೇಷ ಮಳೆಯೂ ಕರಾಳ ನೆನಪು ತಂದಿದೆ.
ಭೂಕುಸಿತಕ್ಕೆ ಏಳು ಮಂದಿ ಬಲಿಯಾಗಿದ್ದಾರೆ.
ಎಂಟಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದಾರೆ.
ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಸಮೀಪದ ಕೋರಂಗಾಲದಲ್ಲಿ ಭೂ ಕುಸಿತಕ್ಕೆ ಐವರು ಬಲಿಯಾಗಿದ್ದಾರೆ.
ಅತ್ತೆಡಿ ಯಶವಂತ್,(೪೪)ಬೋಳನ ಬಾಲಕೃಷ್ಣ (೫೫) ಅವರ ಪತ್ನಿ ಯಮುನಾ( ೪೦) ನಡುವಟ್ಟಿ ರಾಜ (೪೫) ಹಾಗೂ ಉದಯ್ ಕುಮಾರ್ (43 ) ಬಲಿಯಾಗಿದ್ದಾರೆ.
ವಿರಾಜಪೇಟೆ ಸಮೀಪದ ಹೆಗ್ಗಲ ಗ್ರಾಮದ ತೋರ ಪ್ರದೇಶದಲ್ಲಿ ಪರಮೇಶ್ ಎಂಬುವವರ ಕುಟುಂಬದ ಮಮತಾ 40 ಹಾಗೂ 15 ವರ್ಷದ ಲಿಖಿತ ಎಂಬ್ ಯುವತಿ ಮನೆ ಮೇಲೆ ಭೂಕುಸಿತ ಉಂಟಾಗಿ ಸಾವೀಗೀಡಾಗಿದ್ದಾಳೆ.
ಮಣ್ಣಿನಡಿಯಲ್ಲಿ ಸಿಲುಕಿರುವವರ ಶೋಧ ಕಾರ್ಯ ಮುಂದುವರೆದಿದೆ. ಇಬ್ಬರ ಮೃತದೇಹ ಪತ್ತೆಯಾಗಿದ್ದು. ಇನ್ನು 8-10 ಜನರು ಸಿಲುಕಿರುವ ಶಂಕೆಯಿದೆ. ರಕ್ಷಣಾ ಕಾರ್ಯ ಮುಂದುವರೆದಿದ್ದು ಭಾರಿ ಮಳೆಯ ಹಾಗೂ ಕೆಸರು ಕಾರಣ ತಡೆಯಾಗುತ್ತಿದೆ.
ಕೊಡಗಿನಲ್ಲಿ ಭೂಕುಸಿತಕ್ಕೆ ೭ ಮಂದಿ ಬಲಿಯಾಗಿದ್ದಾರೆ. ಭೂಕುಸಿತಕ್ಕೆ ಸಿಲುಕು
ಇನ್ನೂ ೧೦ಕ್ಕೂ ಹೆಚ್ಚು ಜನ ಮೃತಪಟ್ಟಿರುವ ಸಾಧ್ಯತೆ ಇದೆ.
ವಿರಾಜಪೇಟೆ ತಾಲ್ಲೂಕಿನ ಹೆಗ್ಗಳ ಸಮೀಪದ ತೋರೆ ಗ್ರಾಮದಲ್ಲಿ ಗುಡ್ಡ ಕುಸಿತಕ್ಕೆ ಸಿಲುಕಿ ಕಣ್ಮರೆಯಾಗಿರುವವರ ಶೋಧ ಕಾರ್ಯಾಕ್ಕೆ ಮಳೆ ಅಡ್ಡಿಯಾಗಿದೆ.
ಬೆಟ್ಟ ಪ್ರದೇಶಕ್ಕೆ ಯಂತ್ರೋಪಕರಣಗಳನ್ನು ಸಾಗಿಸಲು ಮಳೆ ಅಡಚಣೆಯಾಗಿದೆ.
ಆದ್ದರಿಂದ ನಾಪತ್ತೆಯಾಗಿರುವವ ಶೋಧ ಕಾರ್ಯ ತಡವಾಗುತ್ತಿದೆ.
ಸ್ಥಳಕ್ಕೆ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಹಾಗೂ ಎಂ.ಎಲ್.ಸಿ ವೀಣಾ ಅಚ್ಚಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರವಾಹ, ನೂರಾರು ಮನೆಗಳು ಸಂಪೂರ್ಣ ಜಲಾವೃತ.
50 ಕ್ಕೂ ಹೆಚ್ಚು ಮನೆಗಳ ಕುಸಿತ.
ವಿರಾಜಪೇಟೆ ತಾಲ್ಲೂಕಿನ ಕೊಂಡಂಗೇರಿಯಲ್ಲಿ ಪ್ರವಾಹಕ್ಕೆ 100 ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವೃತವಾಗಿದ್ದು, 50 ಕ್ಕೂ ಹೆಚ್ಚು ಮನೆಗಳ ಕುಸಿತವಾಗಿದೆ.
ಕೊಪ್ಪ, ಅಮ್ಮತ್ತಿ ರಸ್ತೆ, ಕೊಂಡಂಗೇರಿ ಜಂಕ್ಷನ್ ಸೇರಿದಂತೆ ವಿವಿಧೆಡೆಯಲ್ಲಿನ ಮನೆಗಳು ಸಂಪೂರ್ಣವಾಗಿ ಜಲಾವೃತವಾಗಿದೆ. ಕೊಂಡಂಗೇರಿ - ಸಿದ್ದಾಪುರ ಹಾಗೂ ಮೂರ್ನಾಡು ರಸ್ತೆಯಲ್ಲಿ ನೀರು್ ತುಂಬಿ ಸಂಪೂರ್ಣ ಬಂದ್ ಆಗಿದೆ.
ವೃದ್ಧರು ಮಕ್ಕಳು ಸೇರಿದಂತೆ 500 ಕ್ಕೂ ಹೆಚ್ಚು ಮಂದಿ ಸರಕಾರಿ ಶಾಲೆಯ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ನಿರಾಶ್ರಿತ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಿರಾಶ್ರಿತ ಅಬ್ದುಲ್ ರೆಹಮಾನ್ ಮಾತನಾಡಿ, ದಿಢೀರನೆ ಪ್ರವಾಹ ಎದುರಾಗಿರುವುದರಿಂದ ಎಲ್ಲರೂ ಜೀವ ರಕ್ಷಣೆಗಾಗಿ ಮನೆಯಿಂದ ಹೊರಗೆ ಬಂದಿದ್ದಾರೆ. ಕೂಲಿ ಕಾರ್ಮಿರು ಹೆಚ್ಚಾಗಿರುವುದರಿಂದ ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ನಿರ್ಮಿಸಿದ ಮನೆಗಳು ಕುಸಿದು ಹಲವು ಕುಟುಂಬಗಳು ಮುಂದೇನು ಎಂದು ತಿಳಿಯದೆ ಕಂಗಾಲಾಗಿದ್ದಾರೆ. ಹಲವು ಮನೆಗಳು ಸಂಪೂರ್ಣ ಜಲಾವೃತವಾಗಿರುವುದರಿಂದ ಅಗತ್ಯ ದಾಖಲೆಗಳೆಲ್ಲಾ ಮನೆಯೊಳಗೆ ನೀರಿನಲ್ಲಿ ಮುಳುಗಿದೆ. ಪ್ರವಾಹದ ನೀರು ಇಳಿದ ಬಳಿಕ ಸರಕಾರ ಹಾಗೂ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ವರಿಷ್ಠಾಧಿಕಾರಿ ಸುಮನ್ ಜಿಲ್ಲಾ ಪಂಚಾಯಿತಿ ಸಿಇಒ ಲಕ್ಷ್ಮಿ ಪ್ರಿಯಾ ಸೇರಿದಂತೆ ಮತ್ತಿತರರು ಹಾಜರಿದ್ದರು.
ಕೊಡಗಿನಲ್ಲಿ ಉಂಟಾದ ನೆರೆ ಪರಿಸ್ಥಿತಿಯನ್ನು ಸಮಗ್ರವಾಗಿ ನಿರ್ವಹಿಸಲು ಹಾಗೂ ಪರಿಹಾರ ಕಾರ್ಯಗಳಿಗಾಗಿ ರಾಜ್ಯ ಸರ್ಕಾರವು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿಯಲ್ಲಿ ಕೊಡಗು ಜಿಲ್ಲೆಗೆ ೫ ಕೋಟಿ ರೂ ಅನುದಾನ ಬಿಡುಗಡೆಯಾಗಿದೆ.
ಕೊಂಚ ಬಿಡುವು ಕೊಟ್ಟ ವರುಣ:
ಕೊಡಗಿನಲ್ಲಿ ನಿರಂತರವಾಗಿ ಸುರಿಯುತ್ತಿದ್ದ ವರುಣ ಶನಿವಾರ ಕೊಂಚ ಬಿಡುವು ನೀಡಿದೆ.
ಆದರೂ ಹಲವು ಗ್ರಾಮಗಳಿಗೆ ನುಗ್ಗಿದ್ದ ನೀರಿನ ಪ್ರಮಾಣ ಕಡಿಮೆಯಾಗಿಲ್ಲ..
ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.













0 Post a Comment: