ಬೆಳಗಾವಿ: ರಾಜ್ಯದ 18 ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ ಜನರು ಸಾವುನೋವುಗಳಲ್ಲಿ ತತ್ತರಿಸುತ್ತಿರುವ ಭೀಕರತೆ, ಜನರ ಅಸಹಾಯಕತೆಯೂ ಸಹ ಕೆಲವೊಬ್ಬ ರಾಜಕಾರಣಿಗಳ ಮೈಲೇಜ್ ಹೆಚ್ಚಿಸುವ ಪ್ರಚಾರದ ಸರಕಾಗಿ ಬದಲಾಗಿರುವುದು ಮಾತ್ರ ವಿಪರ್ಯಾಸ. ರಾಜ್ಯದಲ್ಲಿ ಇಂತಹ ಅಸಹ್ಯವೊಂದಕ್ಕೆ ನಾಂದಿ ಹಾಡಿದ ಕುಖ್ಯಾತಿಗೆ ಇದೀಗ ಬಿಜೆಪಿ ಶಾಸಕ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪಾತ್ರರಾಗಿದ್ದಾರೆ. ಬಿಜೆಪಿ ಶಾಸಕ ರೇಣುಕಾ ಮಾಹಾತ್ಮೆಯೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆಗೆ ಗುರಿಯಾಗಿದೆ.
The Irresponsible People from @BJP4Karnataka
- Cannot Expand the Cabinet
- Order Lathi Charge on Victims
- Cannot get Centre’s Help
But, Yet continue to go on PhotoOps!
What @MPRBJP is seen doing here is a joke on all the Flood Victims & shame for our state.#ShamelessBJP
87 ಜನರು ಈ ಕುರಿತು ಮಾತನಾಡುತ್ತಿದ್ದಾರೆ
ಈ ಭಾಗದ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಾಮಾನ್ಯವಾಗಿ ಎಲ್ಲಾ ಶಾಸಕರಂತೆ ಪ್ರವಾಹ ಪರಿಹಾರ ಕಾರ್ಯದಲ್ಲಿ ತೊಡಗಿದ್ದರೆ ಯಾರಿಂದಲೂ ಯಾವುದೇ ತಕರಾರಿರಲಿಲ್ಲ. ಆದರೆ, ಭೀಕರ ಪ್ರವಾಹವನ್ನು ತಮ್ಮ ಮೈಲೇಜ್ ಏರಿಸಿಕೊಳ್ಳಲು ಬಳಸಿಕೊಂಡಿರುವ ಅವರ ನಡೆ ಮಾತ್ರ ಇದೀಗ ಎಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಈ ವಿಡಿಯೋ ಸಾಮಾಜಿ ಜಾಲತಾಣದಲ್ಲೂ ಇದೀಗ ಭಾರೀ ವೈರಲ್ ಆಗಿದೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ ಕ್ಯಾಮೆರಾಗೆ ಪೋಸ್ ನೀಡಿರುವ ಶಾಸಕ ರೇಣುಕಾರ್ಯ ನೆರೆ ನಿರಾಶ್ರಿತರನ್ನು ತಾವೇ ಧೋಣಿಯಲ್ಲಿ ಕೂರಿಸಿ ಹೊಟ್ಟುಹಾಕಿ ಕಾಪಾಡಿ ದಡಕ್ಕೆ ಸೇರಿಸುತ್ತಿರುವಂತೆ ಶೂಟ್ ಮಾಡಲು ಮುಂದಾಗಿದ್ದಾರೆ. ಆದರೆ, ಅಸಲಿಗೆ ಮೊಣಕಾಲಿನಷ್ಟೂ ಸಹ ನೀರಿಲ್ಲದ ಜಾಗದಲ್ಲಿ ಧೋಣಿಯಲ್ಲಿ ನಿಂತು ರೇಣುಕಾಚಾರ್ಯ ಹೊಟ್ಟುಹಾಕುತ್ತಿರುವ ದೃಶ್ಯ ಮತ್ತೊಬ್ಬ ತೆಗೆದ ಮೊಬೈಲ್ ವಿಡಿಯೋದಲ್ಲಿ ದಾಖಲಾಗಿದೆ.

0 Post a Comment: