@ಸಂಪಾದಕೀಯ
ಮಡಿಕೇರಿ: ಕೊಡಗು ಕರ್ನಾಟಕ ರಾಜ್ಯದಲ್ಲಿನ ಪುಟ್ಟ ಜಿಲ್ಲೆ, ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತ ಪಡೆದ ಜಿಲ್ಲೆಯಾಗಿದೆ.
ಇಲ್ಲಿನ ಜನತೆಗೆ ಮಳೆ ಎಂದರೆ ಭಯವಿಲ್ಲ, ಮಳೆ ತಮ್ಮ ಜೀವನದ ಅವಿಭಾಜ್ಯ ಅಂಗ ನಮ್ಮ ಜಿಲ್ಲೆಯ ಜನತೆಗೆ.
ಆದರೆ ಕೊಡಗು ಎಂದಿಗೂ ಕಂಡರಿಯದಾ ಮಹಾ ಮಳೆಗೆ ೨೦೧೮ರ ವರ್ಷ ಸಾಕ್ಷಿಯಾಗಿತ್ತು.
ಯಾರೂ ಕೂಡ ಊಹಿಸಲಾಗದ ರೀತಿಯಲ್ಲಿ ವರುಣ ತನ್ನ ರೌದ್ರಾವತಾರವನ್ನು ಮೆರದಿತ್ತು.
ಅಂದು ಆಗಸ್ಟ್ ೧೫ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿ ಎಲ್ಲರೂ ಸಂತೋಷದಿಂದ ಆ ದಿನವನ್ನು ಕಳೆದರೂ.
ರಾತ್ರಿ ಬೆಳಗ್ಗಾವಷ್ಟರಲ್ಲೇ ಇಡೀ ಕೊಡಗಿನ ಚಿತ್ರಣವೇ ಬದಲಾಗಿತ್ತು.
ಅದೆಷ್ಟೋ ಜನರ ಬದುಕು ಬೀದಿ ಪಾಲಾಯಿತು.
ಕೆಲವು ಗ್ರಾಮಗಳೇ ಜಿಲ್ಲೆಯ ಭೂಪಟದಿಂದ ಕಾಣದಾಯಿತು.
ಮನೆ, ತೋಟಗಳನ್ನು ಕಳೆದು ನಿರಾಶ್ರಿತರ ಕೇಂದ್ರದಲ್ಲಿ ಸಂತ್ರಸ್ತರಾಗಿ ಜಿಲ್ಲೆಯ ಜನರು ಕಳೆದ ದಿನಗಳು ಮರೆಯಲು ಸಾಧ್ಯವೇ ನಮಗೆ?...
ಎಂದಿಗೂ ಕೂಡ ಆ ಕರಾಳ ನೆನಪು ನಮ್ಮಿಂದ ಮರೆಯಾಗಲು ಸಾಧ್ಯವೇ ಇಲ್ಲ.
ಸೂರು ಕಳೆದುಕೊಂಡು ಬೀದಿ ಪಾಳಾದವರಲ್ಲಿ ಅನೇಕರಿಗೆ ಇಂದಿಗೂ ಸರಿಯಾದ ಪರಿಹಾರ ದೊರಕದೆ ದಿನಾಲೂ ಸರ್ಕಾರಿ ಕಛೇರಿಗಳಿಗೆ ಅಲೆದಾಡುತ್ತಿರುವ ದೃಶ್ಯವನ್ನು ನಾವು ಕಾಣುತ್ತಿದ್ದೇವೆ.
ಎಕರೆಗಟ್ಟಲೇ ತೋಟ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಇಂದಿಗೂ ತೊರೆತಿಲ್ಲ.
ಕಳೆದ ವರ್ಷ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡವರಲ್ಲಿ ಬಹುತೇಕರು, ತಾವು ಹುಟ್ಟಿ ಬೆಳೆದ ಗ್ರಾಮಗಳನ್ನೇ ಬಿಟ್ಟು, ಇಂದು ಬಾಡಿಗೆ ಮನೆಯಲ್ಲಿ ದಿನದೂಡುತ್ತಿದ್ದಾರೆ.
೧೫ ಕ್ಕೂ ಹೆಚ್ಚು ಜನರು ಕಳೆದ ಆಗಸ್ಟ್ ನಲ್ಲಿ ಸಂಭವಿಸಿದ ಪ್ರವಾಹಕ್ಕೆ ತುತ್ತಾಗಿ ಸಾವನ್ನಪ್ಪಿದ ಆ ಕರಾಳ ಘಟನೆ ಮರೆಯಲು ಸಾಧ್ಯವೇ?....
ಜಾತಿ,ಧರ್ಮ, ಮರೆತು ಕೊಡಗಿನ ಜನರಿಗೆ ದೇಶ, ವಿದೇಶದಲ್ಲಿನ ಜನರು ಮಾನವೀಯತೆಯಿಂದ ಕೈಜೋಡಿಸಿ ಜನರ ಕಣ್ಣೀರೊರೆಸುವ ಕೆಲಸಕ್ಕೆ ಮುಂದಾಗಿ ಕೊಡಗಿನ ಜನರ ನೋವಿನಲ್ಲಿ ಭಾಗಿಯಾಗಿದ್ದರು.
ದೇವಸ್ಥಾನ, ಮಸೀದಿ, ಮಂದಿರಗಳಲ್ಲಿ ಜನರು ಆಶ್ರಯ ಪಡೆದಿದ್ದರು.
ಆ ಕರಾಳ ನೆನಪು ಇನ್ನೂ ಕೂಡ ಮರೆಯಾಗಿಲ್ಲ...
ಆ ನೆನಪು ಮತ್ತೇ ನೆನಪಿಸುಂತಹಾ ಮಳೆ ಕಳೆದ ನಾಲ್ಕು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿದೆ.
ಪ್ರಸಕ್ತ ವರ್ಷ ಮುಂಗಾರಿಗೆ ಇದೇ ಮೊದಲ ಬಾರಿಗೆ ಭಾಗಮಂಡಲ ಜಲಾವೃತವಾಗಿದೆ.
ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಎರಡು ,ಮೂರು ಕಡೆಗಳಲ್ಲಿ ಪರಿಹಾರ ಕೇಂದ್ರ ಆರಂಭಗೊಂಡಿದೆ.
ಹಲವು ಗ್ರಾಮಗಳು ಈಗಾಗಲೇ ಜಾಲವೃತಗೊಂಡಿದೆ.
ಜಿಲ್ಲೆಯಲ್ಲಿ ರೆಡ್ ಅಲರ್ಟ್ ಜಾರಿಯಲ್ಲಿದೆ.
ಮತ್ತೇ ಕಳೆದ ವರ್ಷ ಸಂಭವಿಸಿದ ಆ ಕರಾಳ ನೆನಪು ಮರೆಯಾಗುವುದಕ್ಕಿಂತ ಮುನ್ನ ಕಾವೇರಿ ನಾಡಿನಲ್ಲಿ ಅನಾಹುತಗಳು ಸಂಭವಿಸದಿರಲಿ ಎಂದು ಪ್ರಾರ್ಥಿಸೋಣ....ಎಲ್ಲರೂ ಧೈರ್ಯದಿಂಧಿರಿ.....
ನಾವು ನಮ್ಮ ಜಿಲ್ಲೆಯಲ್ಲಿ "ಗ್ರೀನ್ ಅಲರ್ಟ್ ಘೋಷಣೆ ಮಾಡಿದ್ರೆ"...
ಇಂದಿಗೆ ರೆಡ್ ಅಲರ್ಟ್ ನಲ್ಲಿರುವ ಪರಿಸ್ಥಿತಿ ಬರುತ್ತಿರಲಿಲ್ಲ..

0 Post a Comment: