ಮಡಿಕೇರಿ ಆ.08(ಕರ್ನಾಟಕ ವಾರ್ತೆ):-ಗಾಳಿಬೀಡು, ಪಾಟಿ, ಕಾಲೂರು ಶಾಲೆ ರಸ್ತೆಯಲ್ಲಿ ಅಲ್ಲಲ್ಲಿ ಗುಡ್ಡಗಳ ಜರಿತದಿಂದ ರಸ್ತೆಗಳು ಹಾಳಾಗಿದ್ದು, ಸಂಚಾರ ಯೋಗ್ಯವಾಗಿರದ ಕಾರಣ ಮತ್ತು ಶೀಘ್ರವಾಗಿ ಅಡಚಣೆ ತೆರವು ಕಾಮಗಾರಿ ಕೈಗೊಂಡು ಸಂಚಾರಕ್ಕೆ ಯೋಗ್ಯವಾದ ರಸ್ತೆ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಎಲ್ಲಾ ವಾಹನ ಸಂಚಾರಿಗಳ, ರಸ್ತೆ ಮತ್ತು ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಕಾಯ್ದೆ ಮತ್ತು ಮೋಟಾರ್ ವಾಹನ ಕಾಯ್ದೆ ಮತ್ತು ನಿಯಮಗಳ ಅಧಿಕಾರದಂತೆ ತಾತ್ಕಾಲಿಕವಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಆಗಸ್ಟ್, 31 ರವರೆಗೆ ಗಾಳಿಬೀಡು, ಫಾಟಿ, ಕಾಲೂರು ಶಾಲೆ ರಸ್ತೆಯಲ್ಲಿ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶಿಸಿದ್ದಾರೆ. ನಿಷೇಧಿತ ರಸ್ತೆಯ ಬದಲಿಗೆ ಕೆ.ನಿಡುಗಣೆ, ಹೆಬ್ಬೆಟ್ಟಗೇರಿ, ದೇವಸ್ತೂರು, ಕಾಲೂರು ಸಂಪರ್ಕ ರಸ್ತೆಯಲ್ಲಿ ಸಂಚರಿಸಬಹುದಾಗಿದೆ.
ವಾಹನ ಸಂಚಾರ ನಿಷೇಧ
Categories:
ಕೊಡಗು
Publish Date:
August 08, 2019

0 Post a Comment: