ಕೊಡಗಿನಲ್ಲಿ ಬಕ್ರೀದ್ ಸಂಭ್ರಮವಿಲ್ಲ:ಶುಭಾಶಯ ಮಾತ್ರ 


ಮಡಿಕೇರಿ: ಸೋಮವಾರ ಮುಸ್ಲಿಂ ಸಮುದಾಯದ ಪವಿತ್ರ ಹಬ್ಬಗಳಲ್ಲಿ ತ್ಯಾಗ ಮತ್ತು ಬಲಿದಾನದ ಹಬ್ಬವಾಗಿದೆ ಬಕ್ರೀದ್. ಸಾಮಾನ್ಯವಾಗಿ ಹಬ್ಬ ಎಂದರೆ ಹೊಸ ಬಟ್ಟೆ, ಧರಿಸಿ ತಮ್ಮ ಮಕ್ಕಳೊಂದಿಗೆ ನಗುಮುಖದಿಂದ ಮಸೀದಿಗೆ ಈದ್ ನಮಾಜ್ಗೆ ಬರುವ ಬಹುತೇಕ ಜನರ ಮುಖದಲ್ಲಿ ಆ ಹಳೆಯ ಸಂತೋಷವಿಲ್ಲ, ನಗುಮುಖವಿಲ್ಲ, ಎಲ್ಲರ ಮುಖದಲ್ಲಿ ಕಣ್ಣೀರು ಮರೆ ಮಾಡಿದ್ದನ್ನು ಇಡೀ ಜಿಲ್ಲೆಯ ಮುಸ್ಲಿಂ ಭಾಂದವರಲ್ಲಿ ಕಂಡು ಬಂದು ದೃಶ್ಯ. ಮಕ್ಕಳಿಗೆ ಹೊಸ ಬಟ್ಟೆ ಖರೀದಿಸಿಲ್ಲ, ಮನೆಗಳಲ್ಲಿ ಘಮಘಮಿಸುವ ಬಿರಿಯಾನಿಯ ಸುವಾಸೆಯಿಲ್ಲ, ವಿಧದ ವಿಶೇಷ ಖಾದ್ಯಗಳಿಲ್ಲ, ಬಕ್ರೀದ್ ಸರಳ ರೀತಿಯಲ್ಲಿ ಆಚರಿಸಿದ್ದು ಕೊಡಗು ಜಿಲ್ಲೆಯಲ್ಲಿ‌ ಕಂಡುಬಂತು. 


 ಬಕ್ರೀದ್ ಆಚರಣೆ :ಸಂತ್ರಸ್ತರಿಗೆ ವಿಶೇಷ ಪ್ರಾರ್ಥನೆ
 ‌
 ಚೆಟ್ಟಳ್ಳಿ: ಸಮೀಪದ ಕಂಡಕರೆ ತಖ್ವಾ ಮಸ್ಜಿದ್ ಕಮಿಟಿ ವತಿಯಿಂದ ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು. ಬಕ್ರೀದ್ ನಮಾಜ್ ನೇತೃತ್ವವನ್ನು ಮುಸ್ತಫಾ ಸಖಾಫಿ ವಹಿಸಿದ್ದರು. ನಮಾಜ್ ನಂತರ ಸಂತ್ರಸ್ತರಿಗಾಗಿ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ಈ ಸಂದರ್ಭ ಮಹಲ್ ಅಧ್ಯಕ್ಷರಾದ ಹನೀಫ್ ಮುಸ್ಲಿಯಾರ್ ಕಾರ್ಯದರ್ಶಿ ರಫಿ,f ಗಫೂರ್ ,ರಜಾಕ್ ಇದ್ದರು. ಕಡಂಗ ಮಸೀದಿಯಲ್ಲಿ ಸಂತ್ರಸ್ತರ ಸಹಾಯಕ್ಕೆ ಹಣ ಸಂಗ್ರಹ, ರ ಕಡಂಗ ಬದ್ರಿಯಾ ಜುಮಾ ಮಸೀದಿ ಹಾಗೂ ಮುಹಿಯದ್ದೀನ್ ಜುಮಾ‌ ಮಸೀದಿಯಲ್ಲಿ ಬಕ್ರೀದ್ ನಮಾಜ್ ನಂತದ ಸಂತ್ರಸ್ತರ ಸಹಾಯಕ್ಕೆ ಹಣ ಸಂಗ್ರಹ ಮಾಡಲಾಯಿತು . ಈ ಸಂದರ್ಭ ಬದ್ರಿಯಾ ಮಸೀದಿ ಖತೀಬರಾದ ಹಾರಿಸ್ ಸಖಾಫಿ , ಮುಹಯದ್ದೀನ್ ಮಸೀದಿ ಖತೀಬರಾದ ಮುಹಯದ್ದೀನ್ ಫೈಝಿ ಇದ್ದರು.
 ಕಲ್ಕಂದೂರಿನಲ್ಲಿ ಬಕ್ರೀದ್ ಆಚರಣೆ

 ಸೋಮವಾರಪೇಟೆ ಸಮೀಪದ ಕಲ್ಕಂದೂರಿನಲ್ಲಿ ಸರಳವಾಗಿ ಬಕ್ರೀದ್ ಆಚರಣೆ ಮಾಡಲಾಯಿತು. ನಮಾಜ್ ನೇತೃತ್ವವನ್ನು ಸಮದ್ ಸಖಾಫಿ ಕೊಂಡಂಗೇರಿ ವಹಿಸಿದ್ದರು. ಸಂತ್ರಸ್ತರಿಗಾಗಿ ವಿಶೇಷ ಪ್ರಾರ್ಥನೆ ಮಾಡಲಾಯಿತು. ಈ ಮಾಡಲಾಯಿತು. ನಮಾಜ್ ನೇತೃತ್ವವನ್ನು ಸಮದ್ ಸಖಾಫಿ ಕೊಂಡಂಗೇರಿ ವಹಿಸಿದ್ದರು. ಸಂತ್ರಸ್ತರಿಗಾಗಿ ವಿಶೇಷ ಪ್ರಾರ್ಥನೆ ಮಾಡಲಾಯಿತು. 

 ಕೊಂಡಂಗೇರಿಯಲ್ಲಿ ಸಂತ್ರಸ್ತರೊಂದಿಗೆ ಬಕ್ರೀದ್ ಆಚರಣೆ. 

 ಕೊಂಡಂಗೇರಿಯಲ್ಲಿ ನೂರಕ್ಕೂ ಹೆಚ್ಚು ಮನೆಗಳು ಮಳೆಗೆ ಮುಳುಗಿ,ಸಾವಿರಕ್ಕೂ ಹೆಚ್ಚು ಜನರು ಇಲ್ಲಿ ತೆರಿದಿರುವ ಮಸೀದಿ ಹಾಗು ಶಾಲೆಯಲ್ಲಿನ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಕೊಂಡಂಗೇರಿಯಲ್ಲಿ ಬಕ್ರೀದ್ ಹಬ್ಬವನ್ನು ಸಂತ್ರಸ್ತರೊಂದಿಗೆ ಇಲ್ಲಿನ ಜನತೆ ಆಚರಿಸಿದರು. ಬಕ್ರೀದ್ ನಮಾಜ್ ನಂತರ ಎಲ್ಲರಿಗೂ ವಿಶೇಷ ಊಟವನ್ನು ಸೇವಿಸಿದರು.

 ಬಕ್ರೀದ್ ಹಬ್ಬ ಸರಳವಾಗಿ ಆಚರಣೆ: ಸಂತ್ರಸ್ತರಿಗಾಗಿ ವಿಶೇಷ ಪ್ರಾರ್ಥನೆ 

: ಪ್ರವಾಹಕ್ಕೆ ಸಿಲುಕಿರುವ ನೆರೆಸಂತ್ರಸ್ತರ ನೋವನ್ನರಿತ ಕುಶಾಲನಗರದ ಮುಸಲ್ಮಾನರು, ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸಿದರು. ತ್ಯಾಗ ಬಲಿದಾನದ ಹಬ್ಬವಾದ ಬಕ್ರೀದ್ ದಿನದಂದು ಬೆಳಿಗ್ಗೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ನೆರೆಸಂತ್ರಸ್ತರಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ಹಬ್ಬದ ದಿನದಂದು ಹಳೆಯ ಉಡಿಪುಗಳನ್ನು ಧರಿಸುವ ಮೂಲಕ ಹಾಗೂ ಆಡಂಬರವಿಲ್ಲದೇ ಹಬ್ಬವನ್ನು ಸರಳವಾಗಿ ಆಚರಿಸುವ ಮೂಲಕ ನೆರೆಸಂತ್ರಸ್ತರ ಮೇಲಿನ ಕಾಳಜಿಯನ್ನು ತೋರ್ಪಡಿಸಿದರು. ಪಾಪುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ನೆರೆಸಂತ್ರಸ್ತರಿಗಾಗಿ ಪರಿಹಾರ ನಿಧಿಯನ್ನು ಸಂಗ್ರಹಿಸಿದರು. ಈ ಸಂದರ್ಭ ಮಾತನಾಡಿದ ಹಿಲಾಲ್ ಮಸೀದಿ ಅಧ್ಯಕ್ಷ ಸಲೀಂ ಹಾಗೂ ಜಾಮಿಯಾ ಮಸೀದಿ ಅಧ್ಯಕ್ಷ ಅಲೀಂ ಅವರು ಮಾತನಾಡಿ, ನೆರೆ ಪ್ರವಾಹಕ್ಕೆ ಸಿಲುಕಿದ ನಮ್ಮ ಸಹೋದದರು ನೋವಿನಲ್ಲಿರುವ ನಾವುಗಳು ಹಬ್ಬವನ್ನು ಆಚರಿಸುವುದು ಸರಿಯಲ್ಲ. ಆದ್ದರಿಂದ ತ್ಯಾಗ ಬಲಿದಾನದ ಹಬ್ಬವನ್ನು ನಾವೆಲ್ಲರೂ ಒಗ್ಗೂಡಿ ಸರಳವಾಗಿ ಆಚರಿಸುವುದರ ಜೊತೆಗೆ ನೆರೆಸಂತ್ರಸ್ತರೊಂದಿಗೆ ಕೈಜೋಡಿಸೋಣ ಎಂದರು.

 ಕುಶಾಲನಗರ ಹಿಲಾಲ್ ಮ್ಸೀದಿ ಧರ್ಮಗುರುಗಳಾದ ಸೂಫಿ ಧಾರಿಮಿ ಮತ್ತು ಜಾಮಿಯಾ ಮಸೀದಿ ಧರ್ಮ ಗುರುಗಳಾ್ ಮೌಲಾನಾ ಮುಫ್ತಿ ಮುದಬ್ಬಿರ್ ಅವರ ನೇತೃತ್ವದಲ್ಲಿ ಬಕ್ರೀದ್ ಪ್ರಾರ್ಥನೆ ನಡೆಯಿತು. ದಂಡಿನಪೇಟೆ, ಜನತಾ ಕಾಲೋನಿ, ಕೂಡಿಗೆ, ನಂಜರಾಯಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಮಸೀದಿಗಳಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸುವ ಮೂಲಕ ಸಾಹೋದರತೆಯ ಸಂದೇಶವನ್ನು ಸಾರಿದರು. ಈ ಸಂದರ್ಭ ಹಿಲಾಲ್ ಮಸೀದಿ ಕಾರ್ಯದರ್ಶಿ ಹಮೀeದ್, ಪದಾಧಿಕಾರಿಗಳಾದ ಎರಮು, ಮುಸ್ತಫಾ, ಸಂಸು, ಅಜೀಜ್, ಕಲೀಲ್, ಆಬಿದ್, ರಫೀಕ್, ಜಾಮಿಯಾ ಮಸೀದಿ ಕಾರ್ಯದರ್ಶಿ ತನ್ವೀರ್ ಅಹ್ಮದ್, ಉಪಾಧ್ಯಕ್ಷ ಮುಹಮ್ಮದ್ ಇಕ್ಬಾಲ್, ರಫೀಕ್, ಶೆಫಿ, ಭಾಷಾ, ಮನ್ಸೂರ್, ಫೈರೋಜ್ ಹಾಗೂ ಇನ್ನಿತರರು ಇದ್ದರು.
Previous Post
Next Post

0 Post a Comment: