ಮಡಿಕೇರಿ (TOC ನ್ಯೂಸ್) : ಶಾಲೆಗಳಿಗೆ ಅಕ್ಟೋಬರ್, 06 ರಿಂದ ಅಕ್ಟೋಬರ್, 20 ರವರೆಗೆ ದಸರಾ ರಜೆ ಘೋಷಣೆಯಾಗಿದ್ದು, ಅಕ್ಟೋಬರ್, 03 ಮತ್ತು 04 ರಂದು ನಡೆಯುವ ಅರ್ಧ ವಾರ್ಷಿಕ ಪರೀಕ್ಷಾ ದಿನಾಂಕವನ್ನು ಜಿಲ್ಲೆಯ ಎಲ್ಲಾ ಶಾಲಾ ಮುಖ್ಯಸ್ಥರು ಬದಲಾವಣೆ ಮಾಡಿಕೊಳ್ಳುವುದು ಹಾಗೂ ಅಕ್ಟೋಬರ್, 05 ರಂದು ನಡೆಯುವ ಪರೀಕ್ಷಾ ದಿನಾಂಕವನ್ನು ಮಡಿಕೇರಿ ತಾಲ್ಲೂಕಿನ ಶಾಲಾ ಮುಖ್ಯಸ್ಥರು ಬದಲಾವಣೆ ಮಾಡಿಕೊಳ್ಳುವುದು, ಕಾರಣ ಮಕ್ಕಳ ದಸರಾ ಅಂಗವಾಗಿ ಮಕ್ಕಳ ಸಂತೆ, ಅಂಗಡಿ, ಮಂಟಪ, ಛದ್ಮವೇಶ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿರುವುದರಿಂದ ಮಕ್ಕಳು ಭಾಗವಹಿಸಲು ಅನುಕೂಲವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ ಅವರು ತಿಳಿಸಿದ್ದಾರೆ.
ಅಕ್ಟೋಬರ್ ೦6 ರಿಂದ 2೦ರವೆರೆಗೆ ದಸರಾ ರಜೆ : ಪರೀಕ್ಷಾ ದಿನಾಂಕ ಬದಲಾವಣೆ ಮಾಡಿಕೊಳ್ಳಲು ಡಿ.ಡಿ.ಪಿ.ಐ ಮಚ್ಚಾಡೋ ಸೂಚನೆ
Categories:
ಕೊಡಗು
Publish Date:
September 24, 2019

0 Post a Comment: