ಕಾಫಿ ಬೆಳೆಗಾರರ ಗಮನಕ್ಕೆ


SPECIAL REPORT
ನೀರಿನಲ್ಲಿ ಮುಳುಗಡೆಯಾದ ಕಾಫಿ ತೋಟಗಳಲ್ಲಿ/ ಬ್ಲಾಕ್‍ಗಳಲ್ಲಿ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳುಗಳಲ್ಲಿ ಭಾರಿ ಮಳೆಯಿಂದಾಗಿ ಕೆಲವು ಕಾಫಿ ಹಿಡುವಳಿಗಳ ಪ್ರದೇಶಗಳು ಭಾಗಶ: ಸಂಪೂರ್ಣವಾಗಿ ಮುಳುಗಡೆಯಾಗಿವೆ. ತಗ್ಗು ಪ್ರದೇಶಗಳಲ್ಲಿ ಈ ಸ್ಥಿತಿಯು ಎಲೆಗಳ ಉದುರುವಿಕೆ ಮತ್ತು ಅರೆ ಪಕ್ವ ಕಾಯಿ ಉದುರುವಿಕೆಯನ್ನುಂಟು ಮಾಡುವ ಮೂಲಕ ಭಾರಿ ಬೆಳೆ ನಷ್ಟವಾಗುತ್ತದೆ. ಇದಲ್ಲದೆ ಕಾಫಿ ಬೇರು ಕೊಳೆತವು ಕ್ರಮೇಣ ಕಾಫಿ ಸಸ್ಯಗಳ ಸಾವಿಗೆ ಕಾರಣವಾಗಬಹುದು. ಆದ್ದರಿಂದ, ಕಾಫಿ ಬೆಳೆಗಾರರು ನೀರಿನಲ್ಲಿ ಮುಳುಗಡೆಯಾದ ಬ್ಲಾಕ್‍ಗಳಲ್ಲಿ ಮುಖ್ಯ ಕಾಂಡದ ಸುತ್ತಲು ತರಗನ್ನು ತೆರವುಗೊಳಿಸಿ ಮತ್ತು ಕಾಫಿ ಸಾಲುಗಳ ಮಧ್ಯದಲ್ಲಿ ರಾಶಿ ಮಾಡುವ ಮೂಲಕ ಬೇರಿನ ಮೇಲ್ಮೈ ಗಾಳಿಯಾಡುವಿಕೆಯನ್ನು ಸುಗಮಗೊಳಿಸಬೇಕು. ಇದು ಹಾರ್ಮೋನ್ ಕ್ರಿಯೆಯನ್ನು ನಿರ್ಬಂಧಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿ ನೀರನ್ನು ತ್ವರಿತವಾಗಿ ಹೊರಹಾಕಲು ಅನುಕೂಲವಗುವಂತೆ ಮಾಡಲು 1.5 ರಿಂದ 2 ಅಡಿ ಆಳದ ಒಳಚರಂಡಿಗಳನ್ನು ತೆರೆಯಬೇಕು. ಮಣ್ಣಿನ ಮೇಲಿನ ಮೇಲ್ಮೈ ಗಾಳಿಯಾಡುವಿಕೆಯನ್ನು ಸುಗಮಗೊಳಿಸಲು ಪೊದೆಗಳ ನಿರ್ವಹಣೆ ಮಾಡಬೇಕು. ಎಲ್ಲಾ ಒಣಗಿದ/ ಮುರಿದ/ರೋಗ ಪೀಡಿತ/ಡೈ ಬ್ಯಾಕ್ ಪೀಡಿತ ರೆಂಬೆಗಳನ್ನು ತೆಗೆದು ಹಾಕಬೇಕು. ಬಿದ್ದ ಕಾಫಿ ಸಸ್ಯಗಳು ಯಾವುದಾದರು ಇದ್ದರೆ ವಿಶೇóಷವಾಗಿ ಎಳೆಯ ಸಸ್ಯಗಳನ್ನು ಸರಿಯಾಗಿ ಎರಡು ಕಟ್ಟಿಗೆಗಳ ಸಹಾಯದಿಂದ ನೇರವಾಗಿ ನಿಲ್ಲಿಸಬೇಕು. ಮಣ್ಣಿನ ಜೌಗು ಸ್ಥಿತಿಯನ್ನು ತೆರವುಗೊಳಿಸಿದ ನಂತರ, ಮೂಲ ಬೇರಿನ ಚಟುವಟಿಕೆಯನ್ನು ಪ್ರಚೋದಿಸಲು ಗಿಡದ ಸುತ್ತಲು ಎಕರೆಗೆ ಒಂದು ಚೀಲ ಯೂರಿಯಾವನ್ನು ಕೊಡಬೇಕು. ಕಪ್ಪು ಕೊಳೆತ ಮತ್ತು ಬೆರ್ರಿ ಉದುರುವಿಕೆ ಗಮನಿಸಿದರೆ ಬೆಳೆ ನಷ್ಟವನ್ನು ಕಡಿಮೆ ಮಾಡಲು 200 ಗ್ರಾಂ ಕಾರ್ಬೆಂಡಜಿಮ್ 50 ಡಬ್ಲ್ಯೂ ಪಿ+ 75 ಮಿಲಿ ಪ್ಲಾನೊಫಿಕ್ಸ್ + 100 ಮಿಲಿ ವೆಟ್ಟಿಂಗ್ ಏಜೆಂಟ್ ಅನ್ನು 200 ಲೀಟರ್ ನೀರಿನಲ್ಲಿ ಬೆರೆಸಿ ರೋಗದಿಂದ ಹಾನಿಗೊಳಗಾದ ಗಿಡಗಳಿಗೆ ಸಿಂಪಡಿಸಬೇಕು ಎಂದು ವಿರಾಜಪೇಟೆ ಕಾಫಿ ಮಂಡಳಿಯ ಉಪ ನಿರ್ದೇಶಕರು ತಿಳಿಸಿದ್ದಾರೆ.
Previous Post
Next Post

0 Post a Comment: