ಸ‌ಅದಿಯಾ ಗೋಲ್ಡನ್‌ ಜ್ಯೂಬಿಲಿ : ಕೊಡಗಿನಲ್ಲಿ ‌ಸ‌ಅದಿ ಸಂಗಮ


ವರದಿ : ಶಿಬಿಲಿ ಕಲ್ಕಂದೂರು
ಮಡಿಕೇರಿ (TOC ನ್ಯೂಸ್) : ದಕ್ಷಿಣ ಭಾರತದ ಅತ್ಯುನ್ನತ ಧಾರ್ಮಿಕ ಲೌಕಿಕ ವಿದ್ಯಾಸಂಸ್ಥೆ ಕಾಸರಗೋಡುವಿನ ಪ್ರತಿಷ್ಠಿತ ಜಾಮಿಯ ಸಅದಿಯಾ ಅರಬಿಯಾ ಇದರ ಗೋಲ್ಡನ್ ಜ್ಯುಬಿಲಿ ಮಹಾ ಸಮ್ಮೇಳನವು ಡಿಸೆಂಬರ್ 27 28 29ರಂದು ವಿವಿಧ ಕಾರ್ಯಸೂಚಿಯಡಿ ಜಾಗತಿಕ ನಾಯಕರ  ಗಣ್ಯ ಉಪಸ್ಥಿತಿಯಲ್ಲಿ ನಡೆಯಲಿದೆ. ಇದರ ಪ್ರಯುಕ್ತ ಸಂಸ್ಥೆಯ ನಿಕಟಪೂರ್ವ ವಿದ್ಯಾರ್ಥಿಗಳ ಒಕ್ಕೂಟವಾದ ಮಜ್ಲಿಸ್ ಉಲಮಾಉಸ್ಸಅದಿಯ್ಯಿನ್ ಇದರ ಕೊಡಗು ಘಟಕದ ಅಧೀನದಲ್ಲಿ ಜಿಲ್ಲೆಯಾದ್ಯಂತ ಪ್ರಚಾರದ ಪ್ರಕ್ರಿಯೆ 24/11/2019ರ ಭಾನುವಾರದಂದು ಚಾಲನೆ ನೀಡಲಿದ್ದು, ನೆಲ್ಯಹುದಿಕೇರಿಯ ದಾರುನ್ನಜಾತ್ ಸಂಸ್ಥೆಯಲ್ಲಿ ನಡೆಯಲಿರುವ ಸಅದಿಯಾ ಗೋಲ್ಡನ್ ಜ್ಯುಬಿಲಿ ಸಮ್ಮೇಳನದ ಪ್ರಚಾರ ಸಮಾವೇಶದಲ್ಲಿ ಮುಖ್ಯಪ್ರಭಾಷಕರಾಗಿ ಮರ್ಝೂಕ್ ಸಅದಿ ಪಾಪಿನಶ್ಶೇರಿ ಭಾಗವಹಿಸಲಿದ್ದಾರೆ.  ಇದರ ಪ್ರಯುಕ್ತ 11/09/2019ರ ಗುರುವಾರ ಕೊಂಡಂಗೇರಿಯಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆಯನ್ನು ಸಂಘಟನೆಯ ಜಿಲ್ಲಾಧ್ಯಕ್ಷರಾದ ಅಬ್ದುಲ್ ರಶೀದ್ ಸಅದಿ ವಹಿಸಿದ್ದರು. ಸಂಸ್ಥೆಯ ನಿಕಟಪೂರ್ವ ಪ್ರಾಶುಂಪಾಲರಾಗಿದ್ದ ಪಿ ಎ ಉಸ್ತಾದರ ಅನುಸ್ಮರಣೆ ರಫೀಖ್ ಸಅದಿಯವರು ನಡೆಸಿದರು. ಕಾರ್ಯದರ್ಶಿಗಳಾದ ನಿಝಾರ್ ಸಖಾಫಿ ಅಫ್ಳಲಿ ಸಅದಿ ಕಡಂಗ ಹಾಗೂ ಮುನೀರ್ ಸಅದಿ ಕೊಳಕೇರಿ ಕ್ರಮವಾಗಿ ಸ್ವಾಗತ ಮತ್ತು ವಂದನೆಯನ್ನು ಹೇಳಿದರು. ಸಭೆಯಲ್ಲಿ ಜಿಲ್ಲೆಯ 40ರಷ್ಟು ಸಅದಿಗಳು ಉಪಸ್ದಿತರಿದ್ದರು.

Previous Post
Next Post

0 Post a Comment: