ಶಾಲಾ, ಕಾಲೇಜುಗಳಿಗೆ ರಜೆ ಎಂಬ ಸುಳ್ಳು ಸಂದೇಶ - ಜಿಲ್ಲಾಧಿಕಾರಿಯಿಂದ ಕ್ರಮದ ಎಚ್ಚರಿಕೆ 


ಮಡಿಕೇರಿ : ಸೋಶಿಯಲ್ ಮೀಡಿಯಾಗಳಲ್ಲಿ ಶಾಲಾ ಕಾಲೇಜುಗಳಲ್ಲಿ ರಜೆ ಘೋಷಿಸಲಾಗಿದೆ ಎಂಬ  ಸಂದೇಶಗಳನ್ನು ರವಾನಿಸುತ್ತಿರುವ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಎಚ್ಚರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸೆಪ್ಟೆಂಬರ್ ೬ ರಂದು ಶಾಲಾ ಕಾಲೇಜುಗಳಿಗೆ ರಜೆ ಎಂಬ ಸುಳ್ಳು ಸುದ್ಧಿ ಹಬ್ಬಿಸುವುದರ ಜತೆಗೆ ಜಿಲ್ಲಾಧಿಕಾರಿಗಳ ಸಹಿ ಹೊಂದಿರುವ ಅನಧಿಕೃತ ಟಿಪ್ಪಣಿಯನ್ನು ನಕಲು ಮಾಡಲಾಗಿದ್ದು ಈ ಬಗ್ಗೆ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದು. ಸುಳ್ಳು ಸಂದೇಶ ಹಬ್ಬಿಸಬೇಡಿ, ಇಂತಹದರ ಬಗ್ಗೆ ಕಿವಿಗೊಡಬೇಡಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
Previous Post
Next Post

0 Post a Comment: